

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಮತ್ತು ಆಂತರಿಕ ಗುಣಮಟ್ಟ ಭರವಸಕೋಶದ ಸಹಯೋಗದೊಂದಿಗೆ ಕಾಲೇಜಿನಲ್ಲಿ ಕಚೇರಿ ಸಹಾಯಕರಾಗಿ 41 ವರ್ಷ 11 ತಿಂಗಳು ಸೇವೆ ಸಲ್ಲಿಸಿದ ಸುಬ್ರಹ್ಮಣ್ಯ ಎಂ.ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ನಿವೃತ್ತರಾದ ಸುಬ್ರಹ್ಮಣ್ಯ ಎಂ. ಮತ್ತು ಪತ್ನಿ ಪ್ರೇಮಾ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಕೆ.ರಂಗಯ್ಯ ಶೆಟ್ಟಿಗಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ.ರವಿ ಕಕ್ಕೆಪದವು, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕರಾಮ್ ಯೇನೆಕಲ್, ನಿವೃತ್ತ ಕಚೇರಿ ಸಿಬ್ಬಂದಿ ಚಂದ್ರಾವತಿ, ರಕ್ಷಕ ಶಿಕ್ಷಕ ಸಂಘದ ಸದಸ್ಯ ನೀಲಪ್ಪ, ನಿವೃತ್ತರ ಪತ್ನಿ ಪ್ರೇಮಾ, ಪುತ್ರಿ ಚೈತ್ರಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ದಿನೇಶ್ ಕೆ. ಮೊದಲಾದವರಿದ್ದರು.
ಐಕ್ಯುಎಸಿ ಸಂಯೋಜಕಿ ಲತಾ ಬಿ.ಟಿ. ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕಿ ಪ್ರಮೀಳಾ ಎನ್. ಸ್ವಾಗತಿಸಿದರು. ಸುಮಿತ್ರಾ ಕುಮಾರಿ ನಿರೂಪಿಸಿದರು. ಕೃತಿಕಾ ವಂದಿಸಿದರು.