ಸುರಕ್ಷಾ ಅಧಿಕಾರಿ ರಮಿತಾಗೆ ಬೀಳ್ಕೊಡುಗೆ

3 vpt 2
ವಿರಾಜಪೇಟೆ ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿವೃತ್ತಿಯಾದ ಸುರಕ್ಷಾ ಅಧಿಕಾರಿ ಕೆ.ಕೆ.ರಮಿತಾ ಅವರನ್ನು ಬೀಳ್ಕೊಡುಗೆ ನೀಡಲಾಯಿತು. ತಾಲೂಕು ವೈದ್ಯಾಧಿಕಾರಿ ಯತಿರಾಜ್, ವೈದ್ಯಾಧಿಕಾರಿ ಶರಣ್ ಸುಬ್ಬಯ್ಯ ಇತರರು ಇದ್ದರು.
Published on

ವಿರಾಜಪೇಟೆ: ಇಲ್ಲಿನ ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸುರಕ್ಷಾ ಅಧಿಕಾರಿ ಕೆ.ಕೆ.ರಮಿತಾ ಅವರನ್ನು ವಿರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಸನ್ಮಾನಿಸಿ ಬೀಳ್ಕೊಟ್ಟರು.

ಉತ್ತಮ ಸೇವೆ ಹಾಗೂ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಉತ್ತಮ ಸಾಧನೆ ತೋರಿದ್ದಕಾಗಿ ಕೇಂದ್ರ ಸರ್ಕಾರದಿಂದ ಚಿನ್ನದ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದರು. ಅಲ್ಲದೆ ಸ್ಥಳೀಯ ಗ್ರಾಮೀಣ ಜನರ ಮೆಚ್ಚುಗೆಗೂ ಪಾತ್ರರಾಗಿದ್ದರು. ಕಾರ್ಯಕ್ರಮದಲ್ಲಿ ಕುಟ್ಟಂದಿ ಆರೋಗ್ಯ ಉಪ ಕೇಂದ್ರದ ವೈದ್ಯ ಡಾ. ಶರಣ್ ಸುಬ್ಬಯ್ಯ, ಶುಶ್ರೂಷಕ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net