

ಕುಂದಾಪುರ: ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದಿ ಅಧ್ಯಾಪಕರಾಗಿ 18 ವರ್ಷ ಸೇವೆ ಸಲ್ಲಿಸಿ ವಯೋ ನಿವೃತ್ತರಾದ ವಸಂತ ಶೆಟ್ಟಿ ಎಂ. ಇವರನ್ನು ಕಾಲೇಜಿನ ಪರವಾಗಿ ಬೀಳ್ಕೊಡಲಾಯಿತು.
ಕುಂದಾಪು ಭಾಗ್ಯವಂತೆ ರೋಜರಿ ವಾತಾ ಚರ್ಚಿನ ಧರ್ಮಗುರು, ವಿದ್ಯಾ ಸಂಸ್ಥೆ ಸಂಚಾಲಕ ಪಾವ್ಲ್ ರೇಗೊ ಅವರು ಬೋಧಕ ಮತ್ತು ಬೋಧಕೇತರರ ಪರವಾಗಿ ಸನ್ಮಾನಿಸಿ ಗೌರವಿಸಿದರು.
ವಸಂತ ಶೆಟ್ಟಿ ಎಂ. ಅವರ ಪತ್ನಿ ಶಿಕ್ಷಕಿ ಆಶಾಲತಾ ಶೆಟ್ಟಿ, ಸೈಂಟ್ ಮೇರಿಸ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ರೇಷ್ಮಾ ರ್ನಾಂಡಿಸ್, ಜೀವನ್ ಲುವಿಸ್, ಕಾಲೇಜಿನ ಬೋಧಕ ಮತ್ತು ಬೋಧಕೇತರರು ಮತ್ತು ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲ ಮುಖ್ಯಸ್ಥರು ಉಪಸ್ಥಿತರಿದ್ದರು.