ಸಂಸ್ಕಾರಗಳಿಗೆ ಬಾಲಗೋಕುಲ ತರಗತಿ ಪೂರಕ

sid (3)
Published on

ಬೆಳ್ವೆ: ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಶ್ರದ್ಧೆ, ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಲ್ಲಿ ಬಾಲ ಗೋಕುಲ ತರಗತಿಗಳು ಮಹತ್ವ ಪಡೆಯುತ್ತವೆ. ಮಕ್ಕಳ ಮುಂದಿನ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಪಾಲಕರ ಪಾತ್ರ ಅಮೂಲ್ಯವಾದುದು ಎಂದು ಬಾಲ ವಿಕಾಸ ಮಂಗಳೂರು ವಿಭಾಗದ ಸಂಯೋಜಕ ಜೀತೆಂದ್ರ ಮಂಗಳೂರು ಹೇಳಿದರು.

ಬೆಳ್ವೆ ಶ್ರೀವಾಸುಕಿ ಸಭಾಭವನದಲ್ಲಿ ಸೋಮವಾರ ನಡೆದ ಬಾಲ ಗೋಕುಲ ತರಗತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ದಕ್ಷಿಣ ಪ್ರಾಂತ್ಯ ಮಠ ಮಂದಿರ ಅರ್ಚಕ ಪುರೋಹಿತ್ ಪ್ರಮುಖ್ ಪ್ರೇವಾನಂದ ಶೆಟ್ಟಿ ಕಟ್ಕೇರಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಹೆಬ್ರಿ ತಾಲೂಕು ಬಾಲಗೋಕುಲ ಸಂಯೋಜಕಿ ವೀಣಾ ಭಟ್ ಹೆಬ್ರಿ, ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ ವೈ.ವಿಜಯಕುವಾರ್ ಶೆಟ್ಟಿ, ಮಡಾಮಕ್ಕಿ ಬೆಪ್ಡೆ ಶ್ರೀರಾಮ ಬಾಲಗೋಕುಲದ ವಾತೃ ಮಂಡಳಿ ಸಂಯೋಜಕಿ ಉಷಾ.ಪಿ.ಶೆಟ್ಟಿ, ಜನಜಾಗೃತಿ ವೇದಿಕೆ ಬೆಳ್ವೆ ವಲಯಾಧ್ಯಕ್ಷ ಎಚ್.ವಸಂತಕುವಾರ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು

ಗಣೇಶ್ ಅರಸಮ್ಮಕಾನು ಸ್ವಾಗತಿಸಿ, ನಿರೂಪಿಸಿದರು. ಪೂರ್ಣಿಮಾ ಐತಾಳ್ ಪ್ರಾರ್ಥಿಸಿದರು. ಎಚ್.ವಸಂತಕುವಾರ್ ಶೆಟ್ಟಿ ಬೆಳ್ವೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net