ಮಂಜುನಾಥ್, ಶಿವಪ್ರಕಾಶ್‌ಗೆ ಬೀಳ್ಕೊಡುಗೆ

ಮಂಜುನಾಥ್, ಶಿವಪ್ರಕಾಶ್‌ಗೆ ಬೀಳ್ಕೊಡುಗೆ
Published on

ಕೆ.ಆರ್.ಪೇಟೆ: ಹೇಮಾವತಿ ಜಲಾಶಯ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮುಖ್ಯ ಇಂಜಿನಿಯರ್ ಮಂಜುನಾಥ್ ಮತ್ತು ಮೈಸೂರು ಕಾಡಾ ಕಚೇರಿಯ ಭೂ ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ್ ಅವರಿಗೆ ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಹೇಮಾವತಿ ಜಲಾಶಯ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲದ ಪ್ರಧಾನ ಕಚೇರಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು.

ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲದ ಅಧ್ಯಕ್ಷ ಆರ್.ಎ.ನಾಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡ್ಯ, ಮೈಸೂರು, ತುಮಕೂರು, ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ನಮ್ಮ ಮಹಾಮಂಡಲದ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ತಮ್ಮ ಅಧಿಕಾರದ ಅವಧಿಯಲ್ಲಿ ಹೆಚ್ಚು ಸೌಲಭ್ಯಗಳನ್ನು ಕೊಡಿಸುವಲ್ಲಿ ಇಬ್ಬರೂ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಹೇಮಾವತಿ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಸ್ಥಾಪನೆ ಮಾಡಲು ಪೂರ್ಣ ಸಹಕಾರ ನೀಡಿದ್ದಾರೆ ಎಂದರು.

ನಿವೃತ್ತ ಮುಖ್ಯ ಇಂಜಿನಿಯರ್ ಮಂಜುನಾಥ್ ಮಾತನಾಡಿ, 184 ನೀರು ಬಳಕೆದಾರರ ಸಂಘಗಳು ಅಸ್ತಿತ್ವದಲ್ಲಿದ್ದು, ಹೇಮಾವತಿ ಜಲಾಶಯ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಅಡಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿವೆ. ಇದಕ್ಕೆ ಮಹಾಮಂಡಲದ ಅಧ್ಯಕ್ಷ ಆರ್.ಎ.ನಾಗಣ್ಣ ಮತ್ತು ಪದಾಧಿಕಾರಿಗಳ ಪರಿಶ್ರಮ ಕಾರಣವಾಗಿದೆ ಎಂದು ಹೇಳಿದರು.

ಚನ್ನರಾಯಪಟ್ಟಣ ಹೇಮಾವತಿ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಗಂಗಾಧರ್, ಕೆ.ಆರ್.ಪೇಟೆ ಹೇಮಾವತಿ ಜಲಾಶಯ ಯೋಜನೆಯ ನಂ.3 ಕಾರ್ಯಪಾಲಕ ಇಂಜಿನಿಯರ್ ಚಂದ್ರೇಗೌಡ, ನಂ.5ರ ಎಇಇ ಆನಂದ್, ತುಮಕೂರು ಕಾಡಾ ಇಲಾಖೆಯ ಅಧಿಕಾರಿ ಮಾರುತಿ, ಹೇಮಾವತಿ ಜಲಾಶಯ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲದ ಉಪಾಧ್ಯಕ್ಷ ಯೋಗೇಂದ್ರ, ಕಾರ್ಯದರ್ಶಿ ಕುಮಾರ್, ನಿರ್ದೇಶಕ ಎಚ್.ರಾಜಶೇಖರ್, ಸಿ.ಎಸ್.ನಾಗೇಶ್, ಮಲ್ಲೇಗೌಡ, ನಾಗೇಶ್, ಸಿ.ಟಿ.ಶಿವಪ್ಪ, ಡಿ.ಎ.ಶಿವಪ್ಪ, ಕೆ.ಸಿ.ಧರ್ಮ, ವೈ.ಡಿ.ರಂಗಸ್ವಾಮಿ, ಮಾರ್ಕಂಡೇಗೌಡ, ಯೋಗೇಂದ್ರ, ಸಿದ್ದೇಗೌಡ, ಭೈರೇಗೌಡ, ಕೆ.ಎ.ರಾಮೇಗೌಡ, ಬಿ.ಕೆ.ಹೊನ್ನೇಗೌಡ, ಆರ್.ಎಸ್.ಬಲರಾಮ್, ಜೆ.ನರಸಿಂಹೇಗೌಡ, ಮಡುವಿನಕೋಡಿ ಗಂಗಾಧರ್, ಸಾಕ್ಷಿಬೀಡು ರಾಮಕೃಷ್ಣೇಗೌಡ, ಗುಬ್ಬಹಳ್ಳಿ ಮಹೇಶ್, ಚೌಡಸಮುದ್ರ ಶಿವಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net