

ಗುರುಪುರ: ಕರಿಯಂಗಳ ಪಂಚಾಯಿತಿಯಲ್ಲಿ ಕಳೆದ 3 ವರ್ಷಗಳಿಂದ ಪಿಡಿಒ ಆಗಿರುವ ಮಾಲಿನಿ ಅವರು ವಿವಿಧ ಪಂಚಾಯತ್‌ಗಳಲ್ಲಿ ಒಟ್ಟು 33 ವರ್ಷಗಳ ಸುದೀರ್ಘ ಸರ್ಕಾರಿ ಸೇವೆಗೈದಿದ್ದಾರೆ. ಇವರ ಅವಧಿಯಲ್ಲಿ ಕರಿಯಂಗಳ ಗ್ರಾಮ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಕರಿಯಂಗಳ ಗ್ರಾ.ಪಂ ಅಧ್ಯಕ್ಷೆ ರಾಧಾ ಎಲ್ ಹೇಳಿದರು.
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯಿತಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯಾಗಿ ಸೇವಾ ನಿವೃತ್ತಿ ಹೊಂದಿರುವ ಬಿ.ವಿ.ಮಾಲಿನಿ ಅವರಿಗೆ ಶನಿವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಂಚಾಯಿತಿ ಉಪಾಧ್ಯಕ್ಷ ರಾಜು ಕೋಟ್ಯಾನ್, ಪಂಚಾಯಿತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಚಂದ್ರಹಾಸ ಪಲ್ಲಿಪಾಡಿ, ವೀಣಾ ಆಚಾರ್ಯ, ಚಂದ್ರಾವತಿ, ಉಮೇಶ್ ಆಚಾರ್ಯ, ಸುಬ್ರಾಯ ಕಾರಂತ, ಅಂಗನವಾಡಿ ಶಿಕ್ಷಕಿ ರೇಣುಕಾ, ಸಿಸ್ಟರ್ ದೇವಕಿ, ಭಾರತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್, ಮಾಲಿನಿ ಅವರಿಗೆ ಶುಭ ಹಾರೈಸಿದರು.
ಈ ವೇಳೆ ಪಂಚಾಯಿತಿನ ನೀರು ಸರಬರಾಜು ಮಾಡುವ ಭೋಜ ಪೂಜಾರಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿ, ನಿರೂಪಿಸಿದರು.