ಕಾಸರಗೋಡು: ನೀಲೇಶ್ವರ ತೈಕಡಪ್ಪುರ ಆಳಸಮುದ್ರದಲ್ಲಿ ಬಲವಾದ ಅಲೆಗೆ ಸಿಲುಕಿದ ಮೀನುಗಾರಿಕಾ ದೋಣಿ ಹಾನಿಗೀಡಾಗಿದೆ. ದೋಣಿಯಲ್ಲಿದ್ದ ನಾಲ್ಕು ಮಂದಿ ಕಾರ್ಮಿಕರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಮೀನುಗಾರರಾದ ನಾರಾಯಣ, ಮಹಮ್ಮದ್, ಪ್ರಮೋದ್ ಹಾಗೂ ನಾರಾಯಣನ್ ಎಂಬುವರು ಪಾರಾದವರು.
ಉಮೇಶ್ ಎಂಬುವರ ಮಾಲೀಕತ್ವದ ದೋಣಿ ಇದಾಗಿದ್ದು, ಆಳಸಮುದ್ರದಲ್ಲಿ ಯಂತ್ರ ಸ್ಥಗಿತಗೊಂಡಿತ್ತು. ಇದಾದ ಅಲ್ಪ ಹೊತ್ತಿನಲ್ಲಿ ಬಲವಾದ ಅಲೆ ಅಪ್ಪಳಿಸಿದೆ. ದೋಣಿಯಲ್ಲಿದ್ದವರು ನೀರಿಗೆ ಬಿದ್ದಿದ್ದು, ಇತರ ಮೀನುಗಾರರು ರಕ್ಷಿಸಿದ್ದಾರೆ.