ಮುಖ್ಯ ಶಿಕ್ಷಕ ವೆಂಕಟೇಶ್‌ಗೆ ಬೀಳ್ಕೊಡುಗೆ

3blrp4
ವಿಶ್ವ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೆಂಕಟೇಶ್‌ರನ್ನು ಅಭಿನಂದಿಸಿ ಬೀಳ್ಕೊಡುತ್ತಿರುವ ಶಿಕ್ಷಕರು.
Published on

ಬೇಲೂರು: ಸರ್ಕಾರಿ ನೌಕರನಾಗಿರಲಿ ಅಥವಾ ಯಾವುದೇ ಹುದ್ದೆಯಲ್ಲಿರಲಿ ಸರ್ಕಾರದ ಆದೇಶದಂತೆ ನಿವೃತ್ತಿ ಹೊಂದಲೇಬೇಕು ಎಂದು ವಿಶ್ವ ಪ್ರೌಢಶಾಲೆ ಸಂಸ್ಥಾಪಕ ಅಧ್ಯಕ್ಷ ಮತ್ತು ನಿವೃತ್ತ ಉಪನ್ಯಾಸಕ ಜಯಣ್ಣಗೌಡ ಹೇಳಿದರು.

ಪಟ್ಟಣದ ವಿಶ್ವ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಶಿಕ್ಷಕ ವೆಂಕಟೇಶ್ ಅವರನ್ನು ಸನ್ಮಾನಿಸಿ ಮಾತನಾಡಿದರು.

1995ರಲ್ಲಿ ವಿಶ್ವ ಪ್ರೌಢಶಾಲೆ ಪ್ರಾರಂಭವಾಯಿತು. ಅಂದು ವೆಂಕಟೇಶ್ ನನ್ನ ಜತೆಗೂಡಿ ಮಕ್ಕಳನ್ನು ಶಾಲೆಗೆ ಸೇರಿಸುವುದು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಸಂಸ್ಕಾರ ಕಲಿಸಿದ್ದಾರೆ. ಅಲ್ಲದೆ ಮಕ್ಕಳ ಚಲನವಲನ ಬಗ್ಗೆ ಪಾಲಕರೊಂದಿಗೆ ಚರ್ಚಿಸಿ ಸರಿಪಡಿಸುವ ಕೆಲಸ ಮಾಡುತ್ತಿದ್ದರು. ಇಂದು ಅವರಿಂದ ಶಿಕ್ಷಣ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ವೆಂಕಟೇಶ್ ಅವರು ನಿವೃತ್ತಿ ಹೊಂದಿದರೂ ನಮ್ಮೊಂದಿಗೆ ನಮ್ಮ ಶಾಲೆಯಲ್ಲಿ ಇನ್ನಷ್ಟು ದಿನ ಸೇವೆ ಸಲ್ಲಿಸಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕ ವೆಂಕಟೇಶ್, 30 ವರ್ಷಗಳ ಕಾಲ ವಿಶ್ವ ಪ್ರೌಢಶಾಲೆಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಬರದಂತೆ ನೋಡಿಕೊಂಡಿದ್ದೇನೆ ಎಂದರು.

ಶ್ರೀ ಅಯ್ಯಪ್ಪ ಸೇವಾ ಸಮಿತಿ ಟ್ರಸ್ಟಿ ಯಮಸಂದಿ ಪಾಪಣ್ಣ, ವಿಶ್ವ ಪ್ರೌಢಶಾಲೆ ಕಾರ್ಯದರ್ಶಿ ಯಶಸ್ವೀ ಸೇರಿದಂತೆ ಸ್ನೇಹಿತರು, ಹಳೇ ವಿದ್ಯಾರ್ಥಿಗಳು, ಶಿಕ್ಷಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net