

ಹೆಬ್ರಿ: ವರ್ಗಾವಣೆಗೊಂಡ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಟಕದ ಗೌರವ ಕಾರ್ಯದರ್ಶಿ ಡಾ.ಪ್ರವೀಣ ಕುವಾರ ಎಸ್. ದಂಪತಿಗೆ ಬೀಳ್ಕೊಡುಗೆ ಹಾಗೂ ಅಭಿನಂದನೆ ಕಾರ್ಯಕ್ರಮ ತಾಲೂಕು ಕಸಾಪ ಘಟಕದಿಂದ ಇತ್ತೀಚೆಗೆ ನಡೆಯಿತು.
ಉದ್ಯಮಿ ಯೋಗೀಶ ಭಟ್ ವಾತನಾಡಿ, ಹೆಬ್ರಿಯ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿಯಾಗಿ ಐದು ತಾಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರವೀಣಕುವಾರ್ ಅವರ ಸೇವೆ ಅವಿಸ್ಮರಣೀಯವಾದುದು. ಹೆಬ್ರಿ ತಾಲೂಕಿನ ಸಾಹಿತ್ಯ ಮತ್ತು ಸಂಟನೆಗಳಲ್ಲಿ ಗುರುತಿಸಿಕೊಂಡಿದ್ದರು ಎಂದರು.
ಹೆಬ್ರಿ ತಾಲೂಕು ಟಕ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಸದಸ್ಯ ರಾಧಾಕೃಷ್ಣ ರಾವ್, ಗೌರವ ಕಾರ್ಯದರ್ಶಿ ಮಂಜುನಾಥ ಕೆ.ಶಿವಪುರ, ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.