ಸ್ವಾವಲಂಬಿ ಬದುಕಿಗೆ ಎಂಸಿಸಿ ಬ್ಯಾಂಕ್ ಸಹಕಾರ

byn (3)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

113 ವರ್ಷಗಳ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸುವ ಮೂಲಕ ಜನರ ಬಳಿಗೆ ಹೋಗಿ ಸೇವೆ ವಾಡುತ್ತಿದೆ. ಕೇವಲ ಲಾಭದ ದೃಷ್ಟಿಗಿಂತ ಮುಖ್ಯವಾಗಿ ಸೌಹಾರ್ದತೆ, ಸಾಮರಸ್ಯ ಜೀವನದ ತತ್ವಗಳನ್ನು ಅಳವಡಿಸಿಕೊಂಡು ಸೇವೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಜನರ ಸ್ವಾವಲಂಬಿ ಬದುಕಿಗೆ ಅನೇಕ ರೀತಿಯಲ್ಲಿ ಸಹಕಾರ ನೀಡುತ್ತಿದೆ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹೇಳಿದರು.

ಬೈಂದೂರಲ್ಲಿ ಭಾನುವಾರ ಬ್ಯಾಂಕಿನ 20ನೇ ನೂತನ ಶಾಖೆ ಉದ್ಘಾಟಿಸಿ ವಾತನಾಡಿದರು. ಯಾವುದೇ ಜಾತಿಯತೆ, ರಾಜಕೀಯ ಇಲ್ಲದೆ ಅಭಿವೃದ್ಧಿ ಹಾಗೂ ಸ್ವಾವಲಂಬನೆಗಾಗಿ ಬ್ಯಾಂಕಿನ ಮೂಲಕ ಸಹಾಯ, ಸಹಕಾರ ನೀಡಲಾಗುತ್ತಿದೆ. ನಿರಖ ಠೇವಣಿ, ನಗದು ಪತ್ರ, ಪಿಗ್ಮಿ, ಠೇವಣಿ ಮೊದಲಾದವುಗಳಿಂದ ಸದಸ್ಯರು ಉಳಿತಾಯದ ಹಣವನ್ನು ಜವಾ ವಾಡಬಹುದಾಗಿದೆ. ಈ ಬ್ಯಾಂಕ್‌ಗೆ ರಿಸರ್ವ್ ಬ್ಯಾಂಕಿನ ಶಾಸನಾತ್ಮಕ ನಿಯಂತ್ರಣವಿರುವುದರಿಂದ ಸದಸ್ಯರು ತಮ್ಮ ಉಳಿತಾಯದ ಹಣದ ಬಗ್ಗೆ ಯಾವುದೇ ಆತಂಕಪಡಬೇಕಾಗಿಲ್ಲ ಎಂದರು.

ಬೈಂದೂರು ಹೋಲಿಕ್ರಾಸ್ ಚರ್ಚ್ ಧರ್ಮಗುರು ವಿನ್ಸೆಂಟ್ ಕುವೆಲ್ಲೊ ಆಶೀರ್ವಚನ ನೀಡಿದರು. ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಸೈಂಟ್ ಥೋಮಸ್ ವಸತಿ ಶಾಲಾ ಪ್ರಾಂಶುಪಾಲ ಫಿಲಿಪ್ ನೆಲಿವಿಲ್ಲ ಶುಭಾಶಂಸನೆಗೈದರು.

ಜಿಪಂ ವಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಬೈಂದೂರು ಪಪಂ ನಾಮನಿರ್ದೇಶಿತ ಸದಸ್ಯ ಸದಾಶಿವ ಪಡುವರಿ, ಶಿರೂರು ಗ್ರಾಪಂ ಉಪಾಧ್ಯಕ್ಷ ಕಾಪ್ಪಿ ನೂರ್ ಮೊಹಮ್ಮದ್, ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಅಧ್ಯಕ್ಷ ನಾಗೆಶ ಖಾರ್ವಿ ಉಪ್ಪುಂದ, ಬೈಂದೂರು ವಕೀಲರ ಸಂ ಅಧ್ಯಕ್ಷ ಮೋಬಿ ಪಿ.ಸಿ., ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜ್ಯೂಡ್ ಡಿಸೋಜ, ಜನರಲ್ ವ್ಯಾನೇಜರ್ ಸುನಿಲ್ ಮಿನೇಜಸ್, ನಿರ್ದೇಶಕರಾದ ಅನಿಲ್ ಪತ್ರಾವೊ, ಆ್ಯಂಡ್ರ ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ರೋಶನ್ ಡಿಸೋಜ, ಜೆ.ಪಿ.ರೊಡ್ರಿಗಸ್, ಹೆರಾಲ್ಡ್ ಜಿ.ಮೊಂತೇರೊ, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ವೃತ್ತಿಪರ ನಿರ್ದೇಶಕರಾದ ಸಿ.ಜಿ.ಪಿಂಟೊ, ಸುಶಾಂತ್ ಸಲ್ದಾನ್ಹಾ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಫೆಲಿಕ್ಸ್ ಡಿಕ್ರುಜ್, ಅಲ್ವಿನ್ ಮೊಂತೇರೊ, ಶರ್ಮಿಳಾ ಮಿನೇಜಸ್ ಇದ್ದರು.

ಬ್ಯಾಂಕ್ ನಿರ್ದೇಶಕ ಎಲ್ಲೋಯ್ ಕೆ.ಕ್ರಾಸ್ಟೋ ಸ್ವಾಗತಿಸಿ, ಹಿರಿಯ ವ್ಯವಸ್ಥಾಪಕ ಸಂದೀಪ್ ಕೊಡ್ರೆಸ್ ವಂದಿಸಿದರು. ಸ್ಟೀವನ್ ಕೊಲೊಸ್ ನಿರೂಪಿಸಿದರು.

ಸಾಧಕರಿಗೆ ಗೌರವ

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಕಟ್ಟಡದ ವಾಲೀಕ ನಾಕಟ್ಟೆ ಜಗನ್ನಾಥ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net