ಉಪ ತಹಸೀಲ್ದರ್ ನರಸಿಂಹಯ್ಯಗೆ ಬೀಳ್ಕೊಡುಗೆ

HUN-AUG-31-6(HONOUR TO NARASIMHAIAH)
Published on

 ಹುಣಸೂರು: ಉಪ ತಹಸೀಲ್ದಾರರಾಗಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ನರಸಿಂಹಯ್ಯ ಅವರಿಗೆ ದಲಿತ ಸಂಘರ್ಷ ಸಮಿತಿಯಿಂದ ಬೀಳ್ಕೊಡಲಾಯಿತು.

ಶನಿವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನರಸಿಂಹಯ್ಯ ಅವರನ್ನು ಸನ್ಮಾನಿಸಿ ಮಾತನಾಡಿದ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಕಂದಾಯ ಇಲಾಖೆಗೆ ಬರುವ ದಲಿತರು, ಬಡವರು, ರೈತರೊಂದಿಗೆ ಬಹಳ ಸೌಜನ್ಯತೆಯಿಂದ ಮಾತನಾಡಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನದಂತಹ ಪಿಂಚಣಿ ಯೋಜನೆಗಳನ್ನು ದಿಕ್ಕು ದನಿಯಿಲ್ಲದ ಸೌಲಭ್ಯ ವಂಚಿತ ನಿರ್ಗತಿಕರುಗಳಿಗೆ ಮಾಸಾಶನಗಳನ್ನು ಮಂಜೂರು ಮಾಡಿ ಅವರ ಜೀವನಾಧಾರಕ್ಕೆ ಸಹಾಯ ಮಾಡಿದ್ದಾರೆ. ರಾಷ್ಟ್ರೀಯ ಹಬ್ಬಗಳನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿ ನಮ್ಮ ತಾಲೂಕಿನ ಎಲ್ಲ ಸಮುದಾಯದ ಜನರಿಗೆ ಪ್ರೀತಿಪಾತ್ರರಾಗಿದ್ದಾರೆ. ತಾಲೂಕಿನ ಜನತೆಯ ಪರವಾಗಿ ಆತ್ಮೀಯವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಆದಿಜಾಂಭವ ಸಂಘದ ಜಿಲ್ಲಾ ಉಪಾಧ್ಯಕ್ಷ ಡಿ. ಕುಮಾರ್ ಮಾತನಾಡಿ, ನರಸಿಂಹಯ್ಯ ಎಲ್ಲ ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಇವರ ಕುಟುಂಬಕ್ಕೆ ಆರೋಗ್ಯ ಮತ್ತು ನೆಮ್ಮದಿ ಸಿಗಲೆಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಮಲ್ಲಿಕ್ ಪಾಷ, ನಗರಸಭಾ ಸದಸ್ಯರಾದ ಸತೀಶ್ ಕುಮಾರ್, ಸದಾಶಿವನಕೊಪ್ಪಲು ಸುರೇಶ, ಹನಗೋಡಿನ ಬಸವರಾಜಪ್ಪ, ಎ.ಎ. ಖಾಲಿದ್, ಅಲೆಮಾರಿ ಸಂಘದ ಶೇಖರ್, ಅಂಬೇಡ್ಕರ್ ನಗರ, ರಂಗನಾಥ ಬಡಾವಣೆಯ ವೆಂಕಟೇಶ್, ಬನ್ನಿಕುಪ್ಪೆ ಗ್ರಾ.ಪಂ. ಸದಸ್ಯ ಪರಶುರಾಮ್, ಮಹೇಶ ಇನ್ನು ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net