ಡಿ.ಬಿ.ಸತ್ಯ, ತಿಮ್ಮೇಗೌಡ ಅವರಿಗೆ ಬೀಳ್ಕೊಡುಗೆ

ಡಿ.ಬಿ.ಸತ್ಯ, ತಿಮ್ಮೇಗೌಡ ಅವರಿಗೆ ಬೀಳ್ಕೊಡುಗೆ
Published on

ಕೆ.ಆರ್.ಪೇಟೆ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಿ.ಬಿ.ಸತ್ಯ ಹಾಗೂ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ತಿಮ್ಮೇಗೌಡ ಅವರನ್ನು ಶಾಲೆಯ ವಿದ್ಯಾರ್ಥಿ ಸಂಘಟನೆಗಳ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು.

ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮಲ್ಲಿಕಾರ್ಜುನ್ ಗೌರವಿಸಿ ನಂತರ ಮಾತನಾಡಿ, ಕರ್ತವ್ಯದ ದಿನಗಳಲ್ಲಿ ಉತ್ತಮವಾಗಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ನಿವೃತ್ತಿಯ ನಂತರವೂ ನೌಕರನಿಗೆ ಸಮಾಜ ಗೌರವಿಸುತ್ತದೆ. ಪ್ರತಿಯೊಬ್ಬ ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಆದಷ್ಟು ದಕ್ಷತೆ, ಪ್ರಾಮಾಣಿಕತೆ, ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕ ಎಚ್.ಟಿ.ಮಂಜು, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ಕೆಪಿಎಸ್ ಶಾಲೆಯ ಪ್ರಭಾರ ಪ್ರಾಂಶುಪಾಲ ಡಿ.ಟಿ.ಪುಲಿಗೆರಯ್ಯ, ಉಪಪ್ರಾಂಶುಪಾಲ ರಾಘವೇಂದ್ರ, ಶತಮಾನದ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ನಾಗರತ್ನ, ಕೆಪಿಎಸ್ ಶಾಲೆಯ ಉಪಾಧ್ಯಕ್ಷ ಸಿ.ಬಿ.ಚೇತನ್‌ಕುಮಾರ್, ಎಸ್.ಡಿ.ಎಂ.ಸಿ.ಸದಸ್ಯರಾದ ಲಕ್ಷ್ಮೀ ಪ್ರಸನ್ನ, ಪುರ ಲೋಕೇಶ್, ಜಗದೀಶ್ ಪಾಟೀಲ್, ಕೆ.ಎನ್.ವಾಸುದೇವ್, ಎನ್.ಜೆ.ಮಂಜು, ಮಂಜು, ವೆಂಕಟೇಶ್, ಗಂಗಾಧರ್, ಸ್ವಾಮಿ, ಸುಕನ್ಯಾ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಮೋಹನ್, ಗ್ರಾ.ಪಂ.ಮಾಜಿ ಅಧ್ಯಕ್ಷ ಅನುವಿನಕಟ್ಟೆ ರಾಮಕೃಷ್ಣೇಗೌಡ, ಮಮತಾ, ಕಾವ್ಯಾ, ಮಂಜುಳಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net