ಬಳಂಜ ಶಾಲೆ ಶಿಕ್ಷಕಿ ಗ್ರೇಟ್ಟಾಗೆ ಬೀಳ್ಕೊಡುಗೆ

New Project (9)
Published on

ಬೆಳ್ತಂಗಡಿ: ಬಳಂಜ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ 24 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ಗ್ರೇಟ್ಟಾ ಮರಿಯ ಡಿ ಮೆಲ್ಲೋ ಅವರಿಗೆ ಬೀಳ್ಕೊಡುಗೆ ಇತ್ತೀಚೆಗೆ ನೆರವೇರಿತು.

ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ ಪೂಜಾರಿ ಬಳಂಜ ಶುಭಹಾರೈಸಿದರು. ಗ್ರೇಟ್ಟಾ ಮರಿಯ ಡಿ ಮೆಲ್ಲೋ ಅವರು ಶಾಲೆಗೆ ಪ್ರಾಜೆಕ್ಟರ್ ಕೊಡುಗೆ ನೀಡಿದರು.

ಶಾಲಾ ಅಮತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ, ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್, ಕಾರ್ಯದರ್ಶಿ ರತ್ನರಾಜ್, ಟ್ರಸ್ಟಿಗಳಾದ ಬಿ.ಪ್ರಮೋದ್ ಕುವಾರ್ ಮತ್ತು ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಹರೀಶ್ ವೈ.ಬಳಂಜ, ರೆನಿಲ್ದಾ ಜೋಯ್ಸ ಹಾಗೂ ಕೊಕ್ಕಡ ಸಿಆರ್‌ಪಿ ವಿಲ್ಫ್ರೆಡ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಲೋಚನಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಂಗಸ್ವಾಮಿ ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು, ಪಾಲಕರು, ಮಕ್ಕಳು ಇದ್ದರು. ಕೀರ್ತಿ ವಂದಿಸಿದರು. ಎಸ್‌ಡಿಎಂಸಿ ಸದಸ್ಯೆ ಚೇತನ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net