ಕೇರಳ ಕೇಂದ್ರೀಯ ವಿವಿಯಲ್ಲಿ ಅಂಬೇಡ್ಕರ್ ಜಯಂತಿ

New Project (8)
Published on

ಕಾಸರಗೋಡು: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಂಡಿಸಿರುವ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜ ಸುಧಾರಣೆಗೆ ಅಂಬೇಡ್ಕರ್ ಅವರ ಕನಸು ನನಸಾಗಿಸಲು ಸಾಧ್ಯ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿದ್ದು ಪಿ.ಅಲ್ಗೂರ್ ಹೇಳಿದರು.

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‌ನಲ್ಲಿ ವಿಶ್ವವಿದ್ಯಾಲಯದ ಎಸ್‌ಸಿ-ಎಸ್‌ಟಿ ಸೆಲ್ ಮತ್ತು ಎನ್‌ಎಸ್‌ಎಸ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.

ತಮಿಳುನಾಡು ತಿರುವಳ್ಳುವರ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಕೆ.ಮುರುಗನ್ ಮುಖ್ಯ ಭಾಷಣ ಮಾಡಿದರು. ಕುಲಸಚಿವ ಡಾ.ಎಂ.ಮುರಳೀಧರನ್ ನಂಬಿಯಾರ್, ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಪ್ರೊ.ರಾಜೇಂದ್ರ ಪಿಲಾಂಗಟ್ಟೆ, ಪ್ರೊ.ತಾರು ಎಸ್.ಪವಾರ್, ಡಾ.ಬಿ.ಎಸ್.ಆಶಾಲಕ್ಷಿ ಉಪಸ್ಥಿತರಿದ್ದರು.

ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜಕ ಡಾ.ಎಸ್.ಅನ್ಬಳಗಿ ನೇತೃತ್ವದಲ್ಲಿ ಸಂವಿಧಾನದ ಪೀಠಿಕೆ ಓದಲಾಯಿತು. ಎಸ್‌ಸಿ-ಎಸ್‌ಟಿ ಕೋಶ ಸಂಯೋಜಕ ಡಾ.ಟಿ.ಕೆ.ಅನೀಶ್ ಕುಮಾರ್ ಸ್ವಾಗತಿಸಿದರು. ಸಂಪರ್ಕ ಅಧಿಕಾರಿ ಡಾ.ಪಿ.ಸೆಂಥಿಲ್ ಕುಮಾರನ್ ವಂದಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net