ಬಿ.ಟಿ.ಮಂಜೇಗೌಡರಿಗೆ ಬೀಳ್ಕೊಡುಗೆ

IMG-20250604-WA0039(1)
ಕೆನರಾ ಬ್ಯಾಂಕ್ ಅಧಿಕಾರಿ ಬಿ.ಟಿ.ಮಂಜೇಗೌಡ ಹಾಗೂ ಅವರ ಪತ್ನಿ ಕೆ.ಕೆ.ಪದ್ಮಾ ಅವರನ್ನು ಬರಗೂರು ಕೆನರಾ ಬ್ಯಾಂಕ್ ಶಾಖೆಯ ಆವರಣದಲ್ಲಿ ಕೆನರಾ ಬ್ಯಾಂಕ್ ನೌಕರರು ಹಾಗೂ ಮುಖಂಡರು ಸನ್ಮಾನಿಸಿ ಬೀಳ್ಕೊಟ್ಟರು. ಎ.ಸಿ.ಆನಂದ್ ಕುಮಾರ್, ಡಾ. ಮಹೇಶ್, ಬಿ.ಎಚ್.ಶಿವಣ್ಣ, ರಾಮಚಂದ್ರು, ಮರಿದೇವೇಗೌಡ, ಬಸವರಾಜ್, ಪದ್ಮ, ರಮೇಶ್, ನಿತ್ಯಶ್ರೀ ಇದ್ದರು.
Published on

ಬಾಗೂರು: ಬಡವರು, ರೈತರ ಸೇವೆ ಮಾಡುವುದು ಎಂದರೆ ದೇವರೇ ಒದಗಿಸಿದ ಸೌಭಾಗ್ಯ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಕ್ಯಾಷಿಯರ್ ಬಾಗೂರು ಬಿ.ಟಿ.ಮಂಜೇಗೌಡ ಅವರು ಮಾಡಿರುವ ಸೇವೆ ಅನನ್ಯವಾದದ್ದು ಎಂದು ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎ.ಸಿ.ಆನಂದ್‌ಕುಮಾರ್ ಶ್ಲಾಘಿಸಿದರು.

ಸತತ 40 ವರ್ಷಗಳ ಕಾಲ ವಿವಿಧ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಸೇವೆ ಸಲ್ಲಿಸಿರುವ ಬಾಗೂರು ಬಿ.ಟಿ.ಮಂಜೇಗೌಡ ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ಬರಗೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು. ಚನ್ನರಾಯಪಟ್ಟಣ ತಾಲೂಕಿನಲ್ಲಿ 37 ವರ್ಷ ಕೆನರಾ ಬ್ಯಾಂಕಿನ ಕಲ್ಕೆರೆ, ಸಾತೇನಹಳ್ಳಿ, ಕಾರೆಹಳ್ಳಿ, ಬರಗೂರಿನಲ್ಲಿ ಹೆಚ್ಚು ಕಾಲ ಬಡವರು ರೈತರ ಒಡನಾಡಿಯಾಗಿ ಸರಳತೆಯಿಂದ ಕನ್ನಡದಲ್ಲಿ ಸಾಲದ ಹಣಕಾಸು ನಿರ್ವಹಣೆ ಬಗ್ಗೆ ಸ್ಥಳೀಯರಾಗಿ ಈ ಭಾಗದ ಜನರಿಗೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ, ಡಾ. ಮಹೇಶ್ ಮಾತನಾಡಿದರು. ದೆಹಲಿ ಎಸ್‌ಪಿ ರವಿನಂದನ್, ಎಸ್‌ಪಿ ಸೃಷ್ಟಿ, ಕೆನರಾ ಬ್ಯಾಂಕ್ ರಾಜ್ಯ ಸಂಘದ ಕಾರ್ಯದರ್ಶಿ ಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಮಚಂದ್ರು, ಮ್ಯಾನೇಜರ್ ಚಂದ್ರಕಾಂತ್, ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ಕಾರೆಹಳ್ಳಿ ಕೆ. ರಮೇಶ್, ಇಂಜಿನಿಯರ್ ನಿತ್ಯಶ್ರೀ, ಭಾಸ್ಕರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮರಿದೇವೇಗೌಡ, ಮಾಜಿ ಸದಸ್ಯ ಬಸವರಾಜ್, ಸೈನಿಕ ನಂದೀಶ್, ಬಿ.ಎನ್.ಲೋಕೇಶ್, ಗೋವಿಂದರಾಜ್ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net