

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘದಲ್ಲಿ ಸೇವೆಯಿಂದ ಇತ್ತೀಚೆಗೆ ನಿವೃತ್ತರಾದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೆ.ರಾಧಾ ಶೇಖರ್ಗೆ ಬೀಳ್ಕೊಡುಗೆ ಮತ್ತು ಸಂಘದ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ಭಾನುವಾರ ಸಂಘದ ಪ್ರಧಾನ ಕಚೇರಿ ಸಭಾಭವನದಲ್ಲಿ ಜರುಗಿತು.
ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ 38 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೆ.ರಾಧಾ ಶೇಖರ್ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಜಿ.ರಾಜೀವ ದೇವಾಡಿಗ, ನಿರ್ದೇಶಕರಾದ ಟಿ.ಮಂಜುನಾಥ, ಕೆ.ಉದಯಕುಮಾರ ಶೆಟ್ಟಿ, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ರಂಜಿತ್ ಕುಮಾರ್, ಪ್ರೇಮಾ ಎಸ್.ಪೂಜಾರಿ, ರಶ್ಮಿತಾ, ಗೀತಾ ಶಂಭು ಪೂಜಾರಿ, ಭಾಸ್ಕರ ಶೆಟ್ಟಿ, ಅಚ್ಯುತ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ, ನಿವೃತ್ತ ವ್ಯವಸ್ಥಾಪಕ ಗೋವಿಂದ ಪೂಜಾರಿ, ರಾಧಾ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷ ನಿರ್ದೇಶಕ ಜಿ.ತಿಮ್ಮ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಸಿಬ್ಬಂದಿ ಸಹನಾ ಪ್ರಾರ್ಥಿಸಿದರು. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕ ಸುಧಾಕರ ಕೆ. ಸನ್ಮಾನ ಪತ್ರ ವಾಚಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸುರೇಶ ಕಾಂಚನ್ ವಂದಿಸಿದರು.