ಕಾಪು ತಹಸೀಲ್ದಾರ್‌ಗೆ ಬೀಳ್ಕೊಡುಗೆ ಸಮಾರಂಭ

pdb (1)
Published on

ಪಡುಬಿದ್ರಿ: ಬೆಂಗಳೂರು ಬಿಡಿಎಗೆ ವರ್ಗಾವಣೆಗೊಂಡಿರುವ ಕಾಪು ತಹಸೀಲ್ದಾರ್ ಪ್ರತಿಭಾ ಆರ್. ಅವರಿಗೆ ಕಾಪು ತಾಲೂಕು ಆಡಳಿತ ವತಿಯಿಂದ ಮಂಗಳವಾರ ಬೀಳ್ಕೊಡುಗೆ ಸಮಾರಂಭ ಆಯೋಜನೆಗೊಂಡಿತು. ಸನ್ಮಾನ ಸ್ವೀಕರಿಸಿ ತಹಸೀಲ್ದಾರ್ ಪ್ರತಿಭಾ ಶುಭಹಾರೈಸಿದರು. ಪ್ರಭಾರ ತಹಸೀಲ್ದಾರ್ ಪ್ರದೀಪ್ ಆರ್, ಉಪತಹಸೀಲ್ದಾರ್‌ಗಳಾದ ದೇವಕಿ, ರವಿಕಿರಣ್, ಅಶೋಕ್ ಕೋಟೆಕಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಪುರಸಭೆ ಮುಖ್ಯಾಧಿಕಾರಿ ನಾಗರಾಜ, ಪ್ರಮುಖರಾದ ಬಿ.ಪುಂಡಲೀಕ, ಜಯಲಕ್ಷ್ಮೀ, ಡಾ. ವಾಸುದೇವ ಉಪಾಧ್ಯಾಯ, ಬಸವರಾಜು, ಡೇನಿಯಲ್ ಡಿಸೋಜ, ಮಮತಾ ಶೆಟ್ಟಿ, ಹರೀಶ್ ಹೆಜಮಾಡಿ, ಗೀತಾಂಜಲಿ ಸುವರ್ಣ, ಶಾರದಾ ಪೂಜಾರ್ತಿ, ಸೌಮ್ಯಲತಾ, ಪ್ರಭಾ ಶೆಟ್ಟಿ, ರೇಷ್ಮಾ ಮೆಂಡನ್ ಮತ್ತಿತರರು ಇದ್ದರು. ಶ್ರೀನಿವಾಸ್ ಸ್ವಾಗತಿಸಿದರು. ಲೋಕನಾಥ್ ಲಮಾಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net