

ಕುಂದಾಪುರ: ತಲ್ಲೂರಿನ ಸಂತ ಅಸ್ಸಿಸಿ ಚರ್ಚ್‌ನಲ್ಲಿ ರಾಷ್ಟ್ರೀಯ ಯುವ ದಿನವನ್ನು ಭಾನುವಾರ ಆಚರಿಸಲಾಯಿತು.
ಪ್ರಧಾನ ಯಾಜಕರಾಗಿ ಆಗಮಿಸಿದ ಶಿರ್ವ ಡಾನ್ ಬಾಸ್ಕೊ ಯುವ ಕೇಂದ್ರದ ನಿರ್ದೇಶಕ ಕಿರಣ್ ನಜ್ರೇತ್ ಬಲಿಪೂಜೆಯನ್ನು ನೆರವೇರಿಸಿದರು. ಚರ್ಚಿನ ಧರ್ಮಗುರು ಎಡ್ವಿನ್ ಡಿಸೋಜ ಸಹಕರಿಸಿದರು. ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಅರೋಜ ಅವರು ಸಲಹೆ ನೀಡಿದರು. ಯುವಜನತೆ ಹಾಗೂ ಅವರ ಪಾಲಕರಿಗಾಗಿ ಸಹಮಿಲನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೆರೆಕಟ್ಟೆ ಪುಣ್ಯಕ್ಷೇತ್ರದ ರೆಕ್ಟರ್ ಸುನಿಲ್ ವೇಗಸ್, ಧರ್ಮಗುರು ಕಿರಣ್ ನಜ್ರೇತ್, ಪಾಲನಾ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ, ವಿವಿಧ ಆಯೋಗಗಳ ಸಂಚಾಲಕರು ಮತ್ತು ಧರ್ಮಭಗಿನಿಯರು ಉಪಸ್ಥಿತರಿದ್ದರು.
ಐಸಿವೈಎಂ ಅಧ್ಯಕ್ಷೆ ಎವಿಟಾ ಮೆಂಡೋನ್ಸ ಸ್ವಾಗತಿಸಿದರು. ಐಸಿವೈಎಂ ಸದಸ್ಯರಾದ ಜೋನಿಟಾ ಹಾಗೂ ಎಲ್ಲಾಯ್ಡ ಮೆಂಡೋನ್ಸ ನಿರೂಪಿಸಿದರು.