

ಸುಬ್ರಹ್ಮಣ್ಯ: ಗುರುವಿನ ಕೃಪೆಯಿಂದ ವಿದ್ಯಾರ್ಥಿಗಳ ಬದುಕಿಗೆ ನಿರ್ದಿಷ್ಟ ದಿಕ್ಕು ದೊರೆಯುತ್ತದೆ. ಪಠ್ಯೇತರ ಚಟುವಟಿಕೆಗಳಿಂದಲೂ ವಿದ್ಯಾರ್ಥಿಗಳಿಗೆ ಜ್ಞಾನ ದೊರೆಯುತ್ತದೆ. ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಅಗತ್ಯ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.
ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೇವೆಯಿಂದ ನಿವೃತ್ತರಾದ ಶಿಕ್ಷಕ ರಘು ಬಿಜೂರು ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಪ್ರಮುಖರಾದ ಸುಮಿತ್ರಾ ರಘು ಬಿಜೂರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಅಜಿತ್ ಕುಮಾರ್, ಡಾ.ರಘು, ಅಶೋಕ್ ನೆಕ್ರಾಜೆ, ಪವನ್ ಎಂ.ಡಿ., ಎಸ್.ಎನ್.ಭಟ್, ಕೆ.ಯಶವಂತ ರೈ, ಶೀತಲ್ ಯು.ಕೆ., ಸಂಧ್ಯಾ ಕುಮಾರಿ, ಸುಬ್ರಹ್ಮಣ್ಯ, ಪ್ರಾಚಾರ್ಯ ಸೋಮಶೇಖರ ನಾಯಕ್, ಮುಖ್ಯಶಿಕ್ಷಕಿ ನಂದಾ ಹರೀಶ್, ರಾಜೇಶ್ ಎನ್.ಎಸ್., ತ್ರಿವೇಣಿ ದಾಮ್ಲೆ, ರಾಮಕೃಷ್ಣ ಹೊಳ್ಳಾರು, ಎಂ.ಕೃಷ್ಣ ಭಟ್, ರೇಖಾರಾಣಿ ಸೋಮಶೇಖರ್, ಜಯಪ್ರಕಾಶ್ ಆರ್., ಶ್ರೇಯಸ್ ಮತ್ತು ಪ್ರನ್ವಿತ್ ಉಪಸ್ಥಿತರಿದ್ದರು.