ಕವನದ ಅರ್ಥ ಗಮನಿಸಿ ಹೋಲಿಕೆ : ಡಾ.ಡಿ.ಸದಾಶಿವ ಭಟ್ಟ ಪಳ್ಳು ನಿಡ್ಪಳ್ಳಿ ಹೇಳಿಕೆ ಕವನ ಸಂಕಲನ ಬಿಡುಗಡೆ

New Project (29)
Published on

ಬದಿಯಡ್ಕ: ಈಶ್ವರ ಭಟ್ಟರ ಬುದ್ಧಿಶಕ್ತಿಯಲ್ಲಿರುವ ಹೊಳಪು ಕವನದ ರೂಪದಲ್ಲಿ ಬಂದಿದೆ. ಅವರ ಕವನದ ಅರ್ಥ ಗಮನಿಸಿ ಹೋಲಿಕೆ ನೀಡಬೇಕು ಎಂದು ತಿಳಿಸಿದ ಅವರು ತಮ್ಮ ಸಂತೋಷಕ್ಕಾಗಿ ಕಾವ್ಯವನ್ನು ಬರೆದಿದ್ದಾರೆ ಎಂದು ಡಾ.ಡಿ.ಸದಾಶಿವ ಭಟ್ಟ ಪಳ್ಳು ನಿಡ್ಪಳ್ಳಿ ಹೇಳಿದರು.

75 ವರ್ಷಗಳ ಹಿಂದೆ ರಚಿಸಿದ ಕವನ ಸಂಕಲನ ‘ಕೆಂದಾವರೆ’ಯ ಬಿಡುಗಡೆ ಸಮಾರಂಭ ಕುರುಮುಜ್ಜಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಬುಧವಾರ ಜರುಗಿತು.

ಕಳೆದ ವರ್ಷ ದಿವಂಗತರಾದ ಕುರುಮುಜ್ಜಿ ಈಶ್ವರ ಭಟ್ಟರು ಈ ಕವನಗಳನ್ನು ತನ್ನ ಯೌವನ ಕಾಲದಲ್ಲಿ ರಚಿಸಿದ್ದರು. ಡಾ.ಡಿ.ಸದಾಶಿವ ಭಟ್ಟ ಪಳ್ಳು ನಿಡ್ಪಳ್ಳಿ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಪ್ರಾಧ್ಯಾಪಕ ಪುಂಡೂರು ಪುರುಷೋತ್ತಮ ಪುಣಿಂಚಿತ್ತಾಯ ನುಡಿನಮನ ಸಲ್ಲಿಸಿದರು. ಹಿರಿಯರಾದ ಕೋಟೆ ರಾಮ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ರಾಜಾರಾಮ ಪೆರ್ಲ, ಹವ್ಯಾಸಿ ಪತ್ರಕರ್ತ ಚಂದ್ರಶೇಖರ ಏತಡ್ಕ ಮಾತನಾಡಿದರು. ಡಾ.ಸದಾಶಿವ ಭಟ್ ನಿಡ್ಪಳ್ಳಿ ಅವರನ್ನು ಕುರುಮುಜ್ಜಿ ರಾಜಗೋಪಾಲ ಹಾಗೂ ಮನೆಯವರು ಸನ್ಮಾನಿಸಿದರು. ರಾಧಾಕೃಷ್ಣ ಭಟ್ ಕುರುಮುಜ್ಜಿ ಸ್ವಾಗತಿಸಿದರು. ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು. ಪಾಂಡುರಂಗ ಭಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net