ಲೋಕೋಪಯೋಗಿ ಇಲಾಖೆಯಲ್ಲಿ ಬೀಳ್ಕೊಡುಗೆ

04
Published on

ಸುಬ್ರಹ್ಮಣ್ಯ: ಲೋಕೋಪಯೋಗಿ ಇಲಾಖೆಯ ವಿಶೇಷ ಉಪವಿಭಾಗ ಕುಕ್ಕೆ ಸುಬ್ರಹ್ಮಣ್ಯ ಶಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ಮಂಗಳೂರು ಕಚೇರಿಗೆ ವರ್ಗಾವಣೆಗೊಂಡ ಶಿವರಾಮ ಡಿ. ಅವರಿಗೆ ಬೀಳ್ಕೊಡುಗೆ ಸಮಾರಂಭ ಶನಿವಾರ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀಕಾಂತ್ ಪಿ. ಸನ್ಮಾನಿಸಿದರು. ಬಳಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಅನಿಸಿಕೆ ವ್ಯಕ್ತಪಡಿಸಿದರು. ಸಹಾಯಕ ಇಂಜಿನಿಯರ್‌ಗಳಾದ ಪ್ರಮೋದ್ ಕುಮಾರ್ ಕೆ.ಕೆ., ಜನಾರ್ದನ ಆಚಾರ್ಯ ಕೆ., ಕಿರಿಯ ಇಂಜಿನಿಯರ್ ರವಿಚಂದ್ರ ಐ.ವಿ., ಸಿಬ್ಬಂದಿ ಸುಬ್ರಹ್ಮಣ್ಯ ಕೆ.ನೂಚಿಲ, ತಾರಾನಾಥ್ ಕೆ.ಆರ್., ದೇಗುಲ್ ಬಿ., ಜಗದೀಶ್, ಶ್ವೇತಾ ಪಿ.ಎಂ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net