ಕನ್ಯಾಡಿ ಶ್ರೀ ಚಾತುರ್ಮಾಸ್ಯ ಸಮಾಪ್ತಿ

New Project (11)
Published on

ಬೆಳ್ತಂಗಡಿ: ಉತ್ತರ ಕನ್ನಡದ ಕುಮಟಾ ಕೋನಳ್ಳಿ ಶ್ರೀ ವನದುರ್ಗ ದೇವಸ್ಥಾನದಲ್ಲಿ ಜುಲೈ 10ರಿಂದ ಪ್ರಾರಂಭವಾದ ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾತುರ್ಮಾಸ್ಯ ವ್ರತಾಚರಣೆ ಬುಧವಾರ ಸಮಾಪ್ತಿಗೊಂಡಿತು.

ಬೆಳಗ್ಗೆ ಸ್ವಾಮೀಜಿ ಸೀಮೋಲ್ಲಂನ, ಚಂದಾವರ ಶ್ರೀ ಹನುಮಂತ ದೇವಸ್ಥಾನದಲ್ಲಿ ಗಂಗಾ ಪೂಜೆ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಹರಿದ್ವಾರದ ಪಂಚದಶನಾಮ ಜುನಾ ಅಖಾಡದ ನಿಕಟ ಪೂರ್ವಮಹಾ ಮಂತ್ರಿ ಶ್ರೀ ದೇವಾನಂದ ಸರಸ್ವತಿ ಮಹಾರಾಜ್, ಕರ್ನಾಟಕ ಸರ್ಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ಮಾಂಕಾಳ್ ಎಸ್.ವೈದ್ಯ ಮೊದಲಾದದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net