ಭೀಕರ ರಸ್ತೆ ಅಪಘಾತ: ದೇವರ ದರ್ಶನಕ್ಕೆ ಹೊರಟಿದ್ದ ಒಂದೇ ಕುಟುಂಬದ ಐವರು ಮಸಣಕ್ಕೆ

accident
Published on

ಬೀದರ್: ಲಾರಿ-ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದೇವರ ದರ್ಶನಕ್ಕೆ ಹೊರಟಿದ‌ ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

ಬೀದರ್​​ನ ತಾಲೂಕಿನ ಬಂಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಇರಿಟಿಗಾ ಕಾರು ಮತ್ತು ಕಂಟೆನರ್ ನಡುವೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲಿ, ಆಸ್ಪತ್ರೆಯಲ್ಲಿ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.

ಹೈದರಾಬಾದ್​ನ ಬೇಗಂಪೇಟ್ ನಿವಾಸಿಗಳಾದ ಗಿರಿಧರ (45), ಪ್ರಿಯಾ (15), ಅನೀತಾ (30), ಮಹೇಕ್ (2) ಹಾಗೂ ಚಾಲಕ ಜಗದೀಶ್ (35) ಮೃತ ದುರ್ದೈವಿಗಳು. ಗೀತಾ, ರಜಿತಾ, ಪ್ರಭಾವತಿ, ಶಾಲಿನಿ, ಹರ್ಷವರ್ಧನ ಗಾಯಗೊಂಡಿದ್ದು, ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಿರಿಧರ ಹೈದರಾಬಾದ್​​ನ ಠಾಣೆಯೊಂದರಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಲಬುರಗಿ ಜಿಲ್ಲೆಯ ಗಾಣಗಾಪುರನ ದತ್ತಾತ್ರೇಯ ದರ್ಶನಕ್ಕಾಗಿ ಹೈದರಾಬಾದ್​​ನ ಒಂದೇ ಕುಟುಂಬದ 10 ಸಂಬಂಧಿಕರು ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಈ ಸಂಭಂಧ ಬೀದರ್ ತಾಲೂಕಿನ ಮನ್ನಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net