ಸುಳ್ಳು ಸುದ್ದಿ .. ಬಿಜೆಪಿ ಕಾರ್ಯಕರ್ತೆ ವಿರುದ್ಧ ಸುಮೊಟೊ ಕೇಸ್

Shakuntala_Post
Published on

ತುಮಕೂರು: ಬೆಂಗಳೂರಿನ ಲುಲೂ ಮಾಲ್ನಲ್ಲಿ ರಾಷ್ಟ್ರಧ್ವಜಕ್ಕಿಂತ ಪಾಕಿಸ್ತಾನದ ಧ್ವಜ ಎತ್ತರದಲ್ಲಿ ಹಾರಿಸಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾನಟರಾಜ್ ವಿರುದ್ಧ ಗುರುವಾರ ಸ್ವಯಂಪ್ರೇರಿತವಾಗಿ ತುಮಕೂರಿನ ಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಭಾರತದ ಬಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿ ಇರಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ ನಿಮ್ಮ ಮಾಲ್‌ನವರಿಗೆ ? ಡಿ.ಕೆ.ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಬಾಯ್ಕಟ್ ಲುಲುಮಾಲ್ ಅಂತ ಪೋಸ್ಟ್ ಮಾಡಿದ್ದರು. ಈ ಹಿಂದೆ ಉಡುಪಿ ಶೌಚಾಗೃಹ ವಿಡಿಯೋ ಪ್ರಕರಣ ಸಂದರ್ಭದಲ್ಲು ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಶಕುಂತಲಾರನ್ನು ಪೊಲೀಸರು ಬಂಧಿಸಿದ್ದರು.

ಇದೀಗ ಈ ಪ್ರಕರಣದ ಬೆನ್ನಲ್ಲೆ ತುಮಕೂರು ಪೊಲೀಸರು ಸುಳ್ಳು ಸುದ್ದಿ ಹರಡದಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ ‘ಫೇಕ್ ನ್ಯೂಸ್’ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net