ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ: ಎಫ್​ಐಆರ್ ದಾಖಲು | Tushar Girinath

Tushar Girinath
Published on

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ( Tushar Girinath ) ಅವರ ಹೆಸರಲ್ಲಿ ನಕಲಿ ಫೇಸ್​ಬುಕ್ ( Facebook ) ಖಾತೆ ತೆರೆದಿರುವವರ ವಿರುದ್ಧ ಇಂದು (ಅ.11) ದೂರು ದಾಖಲಾಗಿದೆ.

ನಕಲಿ ಖಾತೆಯ ಸಂಬಂಧ ಕೆಲ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ನಗರದ ಸಿಇಎನ್ ಪೊಲೀಸ್ ಠಾಣೆ (ಕೇಂದ್ರ ವಿಭಾಗ) ಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ವಂಚಕರು ಪಾಲಿಕೆಯ ಮುಖ್ಯ ಆಯುಕ್ತರ ಭಾವಚಿತ್ರ, ಹೆಸರು, ಹುದ್ದೆ ಮತ್ತು ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ‌ ಫೇಸ್ ಬುಕಕ ಖಾತೆ(https://www.facebook.com/share/72znq6cB8NENELpo/) ಯನ್ನು ತೆರೆಯಲಾಗಿದೆ.

Tushar Girinath

ಮುಂದುವರಿದು, ನಕಲಿ ಫೇಸ್​ಬುಕ್ ಖಾತೆ ಮೂಲಕ ಪಾಲಿಕೆಯ ಅಧಿಕಾರಿ ಹಾಗೂ ನೌಕರರಿಗೆ ಮತ್ತು ಸಾರ್ವಜನಿಕರಿಗೆ ವಂಚಿಸುವ ಸಾಧ್ಯತೆ ಇರುವುದರಿಂದ ಸದರಿ ಫೇಸ್​ಬುಕ್ ಖಾತೆಯನ್ನು ಡಿಲೀಟ್ ಮಾಡಿಸಿ, ಫೇಸ್​ಬುಕ್ ಖಾತೆಯನ್ನು ತೆರೆದಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net