

ಬೆಂಗಳೂರು: ನಗರದಲ್ಲಿ ನಕಲಿ ಡಿಡಿ ಡೀಲ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದ್ದು, ದಂಪತಿ ಸೇರಿ ನಾಲ್ವರನ್ನು ಬಂಧಿಸಿರುವ ಪೊಲೀಸರು ಬರೋಬ್ಬರಿ 7.18 ಕೋಟಿ ಮೌಲ್ಯದ ಡಿಡಿಗಳನ್ನು ಜಪ್ತಿ ಮಾಡಿದ್ದಾರೆ.
ಬೇಗೂರಿನ ಇಂದ್ರಜಿತ್ ನಾಯಕ್ ಮತ್ತು ಈತನ ಪತ್ನಿ ಮಂಜುಳಾ ಒಳಗೊಂಡ ಗ್ಯಾಂಗ್ ನಕಲಿ ಡಿಡಿ ಡೀಲ್ ಮಾಡುತ್ತಿದ್ದರು. ಮನೆಯಲ್ಲೇ ನಕಲಿ ಡಿಡಿ ತಯಾರಿಸುತ್ತಿದ್ದ ಗ್ಯಾಂಗ್ನಲ್ಲಿ ಕಾರಾಗೃಹ ಇಲಾಖೆಯಲ್ಲಿ ಈ ಹಿಂದೆ ಎಸ್ಡಿಎ ಆಗಿದ್ದವನೂ ಸೇರಿಕೊಂಡಿದ್ದ ಎಂಬುದು ಮತ್ತೊಂದು ಪ್ರಮುಖ ಅಂಶ. ಈತ ಕರ್ತವ್ಯಲೋಪ ಎಸಗಿ ಕೆಲಸ ಕಳೆದುಕೊಂಡಿದ್ದ. ಈ ಗ್ಯಾಂಗ್ ಹೇಗೆಲ್ಲ ದಂಧೆ ಮಾಡ್ತಿತ್ತು ಎಂಬುದರ ಇಂಚಿಂಚೂ ಮಾಹಿತಿ ಇಲ್ಲಿದೆ. ಇದನ್ನೂ ಓದಿರಿ ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್!
ಗಿರವಿ ಅಂಗಡಿ ಮಾಲೀಕರಿಗೆ ಡಿಸ್ಕೌಂಟ್ ಹೆಸರಲ್ಲಿ ನಕಲಿ ಡಿಡಿ ಕೊಟ್ಟು ವಂಚಿಸುತ್ತಿದ್ದ ಆರೋಪದ ಮೇರೆಗೆ ಇಂದ್ರಜಿತ್ ನಾಯಕ್ (34), ಈತನ ಪತ್ನಿ ಮಂಜುಳಾ (33), ಸ್ನೇಹಿತ ಮುನಿರಾಜು (42) ಮತ್ತು ಆನಂದ್ (43) ಎಂಬುವವರನ್ನ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬರೋಬ್ಬರಿ 7.18 ಕೋಟಿ ರೂ. ಮೌಲ್ಯದ 25 ನಕಲಿ ಡಿಡಿಗಳ ಜತೆಗೆ 9 ಸಾವಿರ ರೂ. ನಗದು, ನಕಲಿ ಡಿಡಿ ತಯಾರಿಕೆಗೆ ಬಳಸಿದ್ದ ಪ್ರಿಂಟರ್, 6 ಸೀಲುಗಳು, ನಕಲಿ ಡಿಡಿ ಸಿದ್ಧಪಡಿಸಲು ಉಪಯೋಗಿಸಿದ್ದ ಲ್ಯಾಪ್ಟಾಪ್, 349 ರೂ. ಮೊತ್ತದ 1 ನೈಜ ಡಿಡಿ, ರಬ್ಬರ್ ಸ್ಟಾಂಪ್ ತಯಾರಿಸಲು ಬಳಸುವ ಫ್ಲಾಷ್ ಮಿಷನ್ ಸೇರಿ ಇತರೆ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮನೆಯಲ್ಲೇ ನಕಲಿ ಡಿಡಿ ರೆಡಿ: ಇಂದ್ರಜಿತ್ ನಾಯಕ್ಗೆ ಸ್ನೇಹಿತ ಮುನಿರಾಜು 349 ರೂ. ಮೊತ್ತದ ಬ್ಯಾಂಕ್ ಆಫ್ ಇಂಡಿಯಾದ ನೈಜ ಡಿಡಿ ಕೊಟ್ಟು, ಈ ಡಿಡಿಯಂತೆಯೇ ನಕಲಿ ಡಿಡಿಗಳನ್ನು ಸಿದ್ಧಪಡಿಸುವಂತೆ ಸೂಚಿಸಿದ್ದ. ಇಂತಹ ನಕಲಿ ಡಿಡಿಗಳನ್ನು ಡಿಸ್ಕೌಂಟ್ ವ್ಯವಹಾರ ನಡೆಸುವವರಿಗೆ ಕೊಟ್ಟು ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂದಿದ್ದ. ಹಣದ ಆಮಿಷಕ್ಕೊಳಗಾದ ಇಂದ್ರಜಿತ್ ಸ್ನೇಹಿತ ನೀಡಿದ ಒರಿಜಿನಲ್ ಡಿಡಿಯನ್ನು ಮನೆಗೆ ತಂದು ಪತ್ನಿ ಮಂಜುಳಾ ಜತೆ ಸೇರಿ ಮನೆಯಲ್ಲೇ ಡಿಡಿ ಸ್ಕ್ಯಾನ್ ಮಾಡಿ, ಅದನ್ನು ಎಡಿಟ್ ಮಾಡಿ ಹಲವು ನಕಲಿ ಡಿಡಿಗಳನ್ನು ತಯಾರಿಸಿದ್ದ. ನಂತರ ಪರಿಚಿತ ಆನಂದ್ನನ್ನು ಭೇಟಿಯಾದ ಇಂದ್ರಜಿತ್, ಡಿಡಿಗಳಿಗೆ ಹಾಕಲು ಬೇಕಾಗುವ ಸೀಲ್ಗಳು ಮತ್ತು ವಿವಿಧ ರಬ್ಬರ್ ಸ್ಟ್ಯಾಂಪ್ಗಳನ್ನು ಮಾಡಿಸಿಕೊಂಡು ಬಂದು ಆ ಸೀಲುಗಳನ್ನು ನಕಲಿ ಡಿಡಿಗಳ ಮೇಲೆ ಮುದ್ರಿಸಿದ್ದ. ಕಂಪ್ಯೂಟರ್ ಕೆಲಸಕ್ಕೆ ಇಬ್ಬರು ಅಸಿಸ್ಟೆಂಟ್ಗಳನ್ನು ಇಟ್ಟಿದ್ದರು. ಇದನ್ನೂ ಓದಿರಿ ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…
ಇದನ್ನು ಗಿರವಿ ಅಂಗಡಿ ಮಾಲೀಕರಿಗೆ ಡಿಸ್ಕೌಂಟ್ ಹೆಸರಲ್ಲಿ ಮಾರಾಟ ಮಾಡುತ್ತಿದ್ದರು. 1 ಲಕ್ಷದ ನಕಲಿ ಡಿಡಿಗೆ 50 ಸಾವಿರ ಅಥವಾ 60 ಸಾವಿರ ರೂ. ಪಡೆಯುತ್ತಿದ್ದರು. ಗಿರವಿ ಅಂಗಡಿ ಮಾಲೀಕರು 40 ಸಾವಿರ ರೂ. ಕಮಿಷನ್ ಆಸೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದರು.
ಈ ಹಿಂದೆ ಹಲವು ಜನರಿಗೆ ಇದೇ ಮಾದರಿಯಲ್ಲಿ ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಇಂದ್ರಜಿತ್ ದಂಪತಿ ವಿರುದ್ಧ ತಲಟ್ಟಪುರ ಸೇರಿ ವಿವಿಧೆಡೆ ಪ್ರಕರಣ ದಾಖಲಾಗಿವೆ.