ನ್ಯಾಯಬೆಲೆ ಅಂಗಡಿಗಳ ದರ್ಬಾರು: ಪ್ರತಿ ವರ್ಷ ನೂರಾರು ಪ್ರಕರಣ ದಾಖಲು

ration new
Published on

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಲಾನುಭವಿಗಳಿಗೆ ವಿತರಿಸಬೇಕಾದ ರೇಷನ್ ದುರ್ಬಳಕೆ, ಅನುಚಿತ ವರ್ತನೆ ಮತ್ತು ಹಣ ವಸೂಲಿ ಮತ್ತಿತರರ ಕಾರಣಕ್ಕಾಗಿ ಪ್ರತಿ ವರ್ಷ ನ್ಯಾಯಬೆಲೆ ಅಂಗಡಿಗಳ ವಿರುದ್ಧ ದಾಖಲಾಗುವ ನೂರಾರು ಪ್ರಕರಣಗಳಲ್ಲಿ ಕಠಿಣ ಕ್ರಮಕೈಗೊಳ್ಳಲು ಆಹಾರ ಇಲಾಖೆಯಲ್ಲಿ ಪ್ರಬಲ ಕಾನೂನು ಇಲ್ಲದಂತಾಗಿದೆ.

ಕಳೆದ 6 ತಿಂಗಳಲ್ಲಿ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿ ವಿರುದ್ಧ 196 ಪ್ರಕರಣಗಳು ದಾಖಲಾಗಿದ್ದರೂ ನಾಮ್‌ಕೇವಾಸ್ತೆ ಎಂಬಂತೆ ಕೆಲ ಅಂಗಡಿಗಳನ್ನು ಅಮಾನತು ಮಾಡಿರುವುದನ್ನು ಬಿಟ್ಟರೆ ಈಗಿನವರೆಗೂ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ಸೇರಿ ಮತ್ತಿತರರ ಕ್ರಮ ಜರುಗಿಸಿಲ್ಲ.

19,965 ನ್ಯಾಯಬೆಲೆ ಅಂಗಡಿ: ರಾಜ್ಯದಲ್ಲಿ 10,93,427 ಅಂತ್ಯೋದಯ, 1,16,81,949 ಬಿಪಿಎಲ್ ಕಾರ್ಡ್ ಹಾಗೂ 20,86663 ಎಪಿಎಲ್ ಕಾರ್ಡ್ ಸೇರಿ ಒಟ್ಟು 1,48, 620,39 ರೇಷನ್ ಕಾರ್ಡ್‌ಗಳಿವೆ. ಪ್ರತಿ ತಿಂಗಳು ರಾಜ್ಯಾದ್ಯಂತ 19,965 ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಎಲ್ಲ ಪಡಿತರದಾರರಿಗೆ ರೇಷನ್ ವಿತರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲ ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ಸರ್ಕಾರದಿಂದ ನೀಡುವ ಉಚಿತ ರೇಷನ್ ದುರ್ಬಳಕೆ ಹಾಗೂ ಪಡಿತರದಾರರಿಂದ ಹಣ ವಸೂಲಿ ಸಂಬಂಧ ಹೆಚ್ಚಿನ ದೂರುಗಳು ದಾಖಲಾಗುತ್ತಿವೆ.

ಧಮ್ಕಿ ಹಾಕುವ ಮಾಲೀಕರು: ಅಂಗಡಿಗಳನ್ನು ನಡೆಯುವ ಅವ್ಯವಹಾರ ಹಾಗೂ ಹಣ ಕೇಳುವ ಸಂಬಂಧ ಪ್ರಶ್ನಿಸಿದ್ದಲ್ಲಿ ಅಂಥವರ ಕಾರ್ಡ್‌ನ್ನೇ ರದ್ದುಗೊಳಿಸುತ್ತೇವೆ ಎಂದು ಮಾಲೀಕರು ಧಮ್ಕಿ ಹಾಕುತ್ತಾರೆ. ಹೀಗಾಗಿ, ಕೆಲ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದರೆ ಇನ್ನೂ ಎಷ್ಟೋ ಪ್ರಕರಣಗಳು ಮುಚ್ಚಿ ಹೋಗಿವೆ. ಪ್ರತಿ ತಿಂಗಳು ರೇಷನ್ ಪಡೆಯುವ ಸಂದರ್ಭದಲ್ಲಿ ಮಾಲೀಕನು 20 ರೂ. ನೀಡುವಂತೆ ನನ್ನನ್ನು ಪೀಡಿಸುತ್ತೇನೆ. ಈ ಬಗ್ಗೆ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಕನಕಪುರದ ಲಾನುಭವಿಯೊಬ್ಬರು ವಿಜಯವಾಣಿ ಜತೆ ಅಳಲುತೊಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net