ಜಾತ್ರೆಯಲ್ಲಿ ರಕ್ತದಾನ ಶಿಬಿರ

29-SanduruP2
ಸಂಡೂರಿನ ಆರಾಧ್ಯದೈವ ಶ್ರೀಕುಮಾರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುತ್ತಿರುವುದು ಸಂಡೂರು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ರಾಮ್‌ಶೆಟ್ಟಿ, ಡಿಎಚ್‌ಇಓ ಈಶ್ವರ ದಾಸಪ್ಪನವರ್, ಬಿಎಚ್‌ಇಓ ಶಿವಪ್ಪ, ಸಿಎಚ್‌ಓ ದಿವ್ಯಾ ಇದ್ದರು.
Published on

ಸಂಡೂರು: ಪಟ್ಟಣದ ಶ್ರೀಕುಮಾರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸ್ಮಯೋರ್ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಸಂಡೂರು ಮತ್ತು ಸ್ವಾಮಿ ವಿವೇಕಾನಂದ ರಕ್ತ ಭಂಡಾರದ ಸಹಯೋಗದಲ್ಲಿ ಎರಡು ದಿನಗಳ ಕಾಲ ರಕ್ತದಾನ ಶಿಬಿರ ನಡೆಯಿತು.

ಸಂಡೂರು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಾಮ್‌ಶೆಟ್ಟಿ ಮಾತನಾಡಿ, ಸ್ವಯಂ ಪ್ರೇರಣೆಯಿಂದ ನ.27ರಂದು ನಲವತ್ತೊಂದು, 28ರಂದು ಎಪ್ಪತ್ತೆರಡು ಸೇರಿ 113 ಭಕ್ತಾಧಿಗಳು ರಕ್ತದಾನ ಮಾಡಿದ್ದಾರೆ.

ಇವರಲ್ಲಿ ಸ್ಮಯೋರ್ ಸಂಸ್ಥೆಯ ಸ್ವಯಂ ಸೇವಕರು, ಪೋಲೀಸರು, ಎನ್.ಸಿ.ಸಿ, ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಸೇರಿದ್ದಾರೆ. ನಾಲ್ಕು ಆಂಬ್ಯುಲೆನ್ಸ್‌ಗಳಿಂದ ಭಕ್ತಾಧಿಗಳಿಗೆ ತಾತ್ಕಾಲಿಕ ಚಿಕಿತ್ಸೆ ನೀಡಲಾಗಿದೆ. ಇಲಾಖೆಯ ಕಾರ್ಯಕ್ರಮಗಳ ಕುರಿತು ವಸ್ತು ಪ್ರದರ್ಶನದ ಮೂಲಕ ಅರಿವು ಮೂಡಿಸಲಾಗಿದೆ ಎಂದರು.

ಡಾ.ಧನ್ಯಕುಮಾರ್, ಡಾ.ಸುರೇಶ್‌ಸಿಂಗ್, ಡಿಎಚ್‌ಇಓ ಈಶ್ವರ ದಾಸಪ್ಪನವರ್, ಬಿಎಚ್‌ಇಓ ಶಿವಪ್ಪ, ಜಿಲ್ಲಾ ಸಂಯೋಜಕ ರಾಘವೇಂದ್ರ, ಐ.ಸಿ.ಟಿ.ಸಿ.ಸಮಾಲೋಚಕ ಮರೇಗೌಡ, ಆರೋಗ್ಯ ನಿರೀಕ್ಷಕ ಬಂಡೇಗೌಡ, ಸಿ.ಎಚ್.ಓ.ದಿವ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net