ಬಿಜೆಪಿ ಕಾರ್ಯಕರ್ತರಿಂದ ರಕ್ತದಾನ ಶಿಬಿರ

bjp new
Published on

ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ರಕ್ತದಾನ ಶ್ರೇಷ್ಠವಾದ ಕಾರ್ಯ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ದೇಹಕ್ಕೆ ಒಳ್ಳೆಯದು ಮತ್ತು ಇದರಿಂದ ಇನ್ನೊಬ್ಬರ ಜೀವ ಉಳಿಸಿದಂತಾಗುತ್ತದೆ ಎಂದು ಹೇಳಿದರು.

ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಸಿದ್ದು ಮೊಗಲಿಶೆಟ್ಟರ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಡಾ. ಕ್ರಾಂತಿ ಕಿರಣ, ಉಮೇಶ ದುಶಿ, ಬಸವರಾಜ ಗರಗ, ಅಶೋಕ ವಾಲ್ಮೀಕಿ, ಮಂಜುನಾಥ ಕಾಟಕರ, ಚೇತನ ಕಲಾಲ, ವೆಂಕಟೇಶ ಹಬೀಬ, ಮುರಗೇಶ ಹೊರಡಿ, ವಸಂತ ನಾಡಜೋಶಿ, ಸತೀಶ ಶೇಜವಾಡಕರ, ನಿಂಗರಾಜ ಮುಂದಿನಮನಿ, ಉಮಾ ಉಕುಂದ, ಅಕ್ಕಮಹಾದೇವಿ ಹೆಗಡೆ, ನಾಗರತ್ನಾ ಬಳ್ಳಾರಿ, ಮೇಘನಾ ಶಿಂಧೆ, ಡಿ.ರಘು, ಪ್ರಶಾಂತ ಹಾವಣಗಿ, ಈಶ್ವರಗೌಡ ಪಾಟೀಲ, ರಾಷ್ಟೋತ್ಥಾನ ರಕ್ತನಿಧಿ ಕೇಂದ್ರದ ಸಿದ್ದು ಅಂಗಡಿ, ನವೀನ ಚಿಕ್ಕಮಠ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net