

ಲಕ್ಷ್ಮೇಶ್ವರ: ಬರಗಾಲ ನಿರ್ವಹಣೆ, ವಿದ್ಯುತ್ ಸಮಸ್ಯೆ, ರೈತರ ಯೋಜನೆ ಕೈಬಿಟ್ಟಿರುವುದನ್ನು ಖಂಡಿಸಿ ಶಿರಹಟ್ಟಿ ಮಂಡಳ ರೈತ ಮೋರ್ಚಾ ಬಿಜೆಪಿ ವತಿಯಿಂದ ಶುಕ್ರವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಮಂಡಳ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಡಿ.ವೈ. ಹುನಗುಂದ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಅಧಿಕಾರಕ್ಕೆ ಬಂದು ಈಗ ಅಧಿಕಾರ ನಿರ್ವಹಿಸುವಲ್ಲಿ ವಿಫಲವಾಗಿದೆ.
ರಾಜ್ಯ ಸರ್ಕಾರ ಎಲ್ಲ ಕಾಮಗಾರಿಗಳಲ್ಲಿ ಕಮಿಷನ್, ವರ್ಗಾವಣೆ ದಂಧೆ ಮಾಡಿಕೊಂಡು ಭ್ರಷ್ಟಾಚಾರಕ್ಕೆ ಮುಂದಾಗಿದೆ. ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದ್ದರೂ ಬರಗಾಲ ಘೊಷಣೆಗೆ ಹಿಂದೇಟು ಹಾಕುತ್ತಿದೆ. ರಾಜ್ಯದಲ್ಲಿ ನೂರಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಕಾಂಗ್ರೆಸ್ 100 ದಿನಗಳ ಆಡಳಿತದಲ್ಲಿ ಐದು ಗ್ಯಾರಂಟಿಗಳನ್ನು ತೋರಿಸುತ್ತಿದೆ ಎಂದು ಟೀಕಿಸಿದರು.
ಹೋರಾಟದಲ್ಲಿ ಶರಣು ಅಂಗಡಿ, ಪ್ರಧಾನಕಾರ್ಯದರ್ಶಿ ಬಸವರಾಜ ಇಟಗಿ, ತಾಲೂಕು ಅಧ್ಯಕ್ಷ ಮಂಜುನಾಥಗೌಡ ಕೆಂಚನಗೌಡ್ರ ಜಾನು ಲಮಾಣಿ, ಸೋಮೇಶ ಉಪನಾಳ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ನಿಂಗಪ್ಪ ಪ್ಯಾಟಿ, ಮುತ್ತಣ್ಣ ಚೋಟಗಲ್, ಅಶೋಕ ಶಿರಹಟ್ಟಿ, ನಿಂಬಣ್ಣ ಮಡಿವಾಳರ, ಪ್ರವೀಣ ಬೋಮಲೆ, ಅನಿಲ ಮುಳಗುಂದ, ದೇವೇಂದ್ರಪ್ಪ, ರವಿಕುಮಾರ ಕೋರಿ, ಹಾಲಪ್ಪ ಸೂರಣಗಿ, ಅಶೋಕ ಸೂರಣಗಿ, ಸಿ.ಎನ್. ಹೂಗಾರ, ಸಿ.ಎಸ್. ಹುನಗುಂದ, ಎಂ.ಎಸ್. ಅಳ್ಳಳ್ಳಿ, ಬಿ.ಎಂ.ಬಾಳಿಕಾಯಿ, ಬಸವರಾಜ ಕಲ್ಲೂರ, ಇದ್ದರು.