

ಚಿಕ್ಕಬಳ್ಳಾಪುರ: ಗ್ರಾಮೀಣ ಸಂಸ್ಕೃತಿಯು ನಿಧಾನವಾಗಿ ಮರೆಯಾಗುತ್ತಿದೆ ಎಂದು ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್ ಬೇಸರಿಸಿದರು. ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಸಂಕ್ರಾಂತಿ ಗಾನ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತವು ಹಳ್ಳಿಗಳ ಸೊಗಡಿನಿಂದ ಕೂಡಿದ ದೇಶ. ಕಷಿಯೇ ಪ್ರಮುಖ ಜೀವಾಳ. ಆದರೆ, ಇಂದು ನಾನಾ ಕಾರಣಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ಭವಿಷ್ಯದಲ್ಲಿ ಗ್ರಾಮೀಣ ಸಂಸ್ಕೃತಿಯು ಸಂಪೂರ್ಣವಾಗಿ ಮರೆಯಾಗುವ ಆತಂಕ ಕಾಡುತ್ತಿದೆ ಎಂದರು.
ಸಾಹಿತಿ ಲಲಿತಾ ರಾಮಮೂರ್ತಿ ವಾತನಾಡಿ, ಗ್ರಾಮೀಣ ಸಂಸ್ಕೃತಿ ಹಾಗೂ ಪರಂಪರೆಯು ವೈಜ್ಞಾನಿಕ ಚಿಂತನೆಗಳಿಂದ ಕೂಡಿದ್ದು ಕಷಿ ಕಾಯಕಗಳೆಲ್ಲಾ ಮುಗಿದು ರೈತರು ಬೆಳೆದ ಧವಸ ಧಾನ್ಯಗಳನ್ನು ಹದ ವಾಡಿ, ಕಣಜ ತುಂಬಿ ಕಷಿ ಚಟುವಟಿಕೆಗಳಿಂದ ವಿರಾಮ ಪಡೆದು ಸಂಭ್ರಮಿಸುವುದೇ ಸುಗ್ಗಿಯ ಸಂಕ್ರಾಂತಿ ಹಬ್ಬ ಎಂದರು.
ಕಷಿ ಕಾಯಕದಲ್ಲಿ ತೊಡಗಿದ್ದಾಗ ದೈಹಿಕ ಶ್ರಮವನ್ನು ಕಡಿಮೆಗೊಳಿಸಲು ಕಷಿಕರು ಜಾನಪದ ಗೀತೆ, ರಾಗಿ ಬೀಸೋಪದ, ಸೋಬಾನೆ ಪದ, ಕೊಯ್ಲು ಗೀತೆಗಳನ್ನು ಹಾಡುತ್ತಿದ್ದರು. ಇಂತಹ ಚಟುವಟಿಕೆಯನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಪ್ರೊ ಕೋಡಿರಂಗಪ್ಪ, ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಸಾಹಿತಿ
ಬಿ.ಎಂ. ಪ್ರಮೀಳಾ, ಕಸಾಪ ಪದಾಧಿಕಾರಿಗಳಾದ ಸು.ದಾ. ವೆಂಕಟೇಶ್, ಕೆ.ಎಂ.ರೆಡ್ಡಪ್ಪ, ಸುಶೀಲಾ ಮಂಜುನಾಥ್, ಡಿ.ಎಂ.ಶ್ರೀರಾಮ, ಮಹಾಂತೇಶ್ ಮತ್ತಿತರರು ಇದ್ದರು.
ಬಹುಮಾನ ವಿತರಣೆ
ಸಂಕ್ರಾಂತಿ ಗಾನ ಸಂಭ್ರಮದ ಸ್ಪರ್ಧೆಯಲ್ಲಿ ಎಂ.ವಿ. ಶ್ರೀನಿವಾಸ್ ಮೊದಲ ಬಹುವಾನ, ಸಷ್ಟಿ ಎರಡನೇ ಬಹುವಾನ, ಇಬ್ರತುನ್ನಿಸಾ ಮೂರನೇ ಬಹುವಾನವನ್ನು ಪಡೆದುಕೊಂಡರು. ತೀರ್ಪುಗಾರರಾಗಿ ಶಿಕ್ಷಕರಾದ ಕಾಂತಮ್ಮ ಮತ್ತು ಶೈಲಾ ಕಾರ್ಯ ನಿರ್ವಹಿಸಿದರು.