ನಕಲಿ ಪಿ.ಎಚ್‌ಡಿ., ಬಿ.ಇಡಿ., ಕಾಲೇಜು ಪ್ರಾಚಾರ್ಯೆ ವಿರುದ್ಧ ಎಫ್‌ಐಆರ್

KSEF_Phd
Published on

ತುಮಕೂರು: ನಕಲಿ ಪಿ.ಎಚ್‌ಡಿ., ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಟಿತ ಕೆಎಸ್‌ಇಎಫ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರ ವಿರುದ್ಧ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಾಲೇಜಿನ ಪ್ರಾಂಶುಪಾಲೆ ಬಿ.ಸುಕನ್ಯಾ ಝಾನ್ಸಿಯ ಬುಂದೆಲ್ ಖಂಡ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಶಾಸ್ತ್ರ ವಿಷಯದಲ್ಲಿ ಪಿ.ಎಚ್‌ಡಿ., ಪಡೆದಿರುವುದಾಗಿ ನಕಲಿ ಪ್ರಮಾಣ ಪತ್ರವನ್ನು ಕಾಲೇಜಿಗೆ ಸಲ್ಲಿಸಿರುವುದು ಬಯಲಾಗಿದ್ದು ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ವಂಚಿಸಿದ್ದಾರೆಂದು ನಗರ ಠಾಣೆಯಲ್ಲಿ ನಗರಠಾಣೆಯಲ್ಲಿ ವಕೀಲ ವಿ. ಲಕ್ಷ್ಮಯ್ಯ ಅವರು ನ್ಯಾಯಾಲಯದ ಮೂಲಕ ಐಪಿಸಿ ಸೆಕ್ಷನ್-463,465,468,471,420ರಡಿ ಪ್ರಕರಣ ದಾಖಲಿಸಿದ್ದಾರೆ.

ಈ ಆರೋಪ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸುಕನ್ಯಾ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು. ಅಲ್ಲದೆ, ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸುವಂತೆ ಕಾಲೇಜಿನ ಆಡಳಿತಾಧಿಕಾರಿಗಳಾಗಿ ನೇಮಕೊಂಡಿರುವ ತುಮಕೂರು ಉಪ ವಿಭಾಗಾಧಿಕಾರಿಗಳನ್ನು ಕರ್ನಾಟಕ ರಾಜ್ಯ ಶಿಕ್ಷಣ ವೇದಿಕೆ ಅಧ್ಯಕ್ಷ ಕೆ.ಗಂಗಾಧರ್ ಮೂರ್ತಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net