

ರಾಯಚೂರು: ಗ್ರಾಪಂ ಒಕ್ಕೂಟದ ಅಧ್ಯಕ್ಷರಿಗೆ ನಾಯಕತ್ವ ಕೌಶಲ್ಯ ಬೆಳೆಸಲು ಪರಿವರ್ತನೆ ಹೆಜ್ಜೆ ತರಬೇತಿ ಕಾರ್ಯಕ್ರಮ ಅನುಕೂಲವಾಗಲಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ತಿಳಿಸಿದರು.
ಇದನ್ನೂ ಓದಿ: ಉಚಿತ ಬ್ಯೂಟಿಷಿಯನ್ ಕೋರ್ಸ್ ತರಬೇತಿ
ನಗರದ ಜಿಪಂ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಿ.ಎ್.ಎಲ್.ಎ್ ಅಧ್ಯಕ್ಷರಿಗೆ 3 ದಿನಗಳ ಪರಿವರ್ತನೆ ಹೆಜ್ಜೆ ಸಾಮರ್ಥ್ಯ ವದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಗ್ರಾಮೀಣ ಸ್ವ ಸಹಾಯ ಗುಂಪು ಸದಸ್ಯರಿಗೆ ಸಾಂಸ್ಥಿಕ ಬೆಂಬಲ ನೀಡಲು, ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಕಣ್ಮರೆಯಾಗಿ ಪರಿವರ್ತಿಸಲು ಸಂಜೀವಿನಿ-ಡೇ-ಎನ್.ಆರ್.ಎಲ್.ಎಂ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಮೂರು ದಿನಗಳ ವಸತಿ ಸಹಿತ ಬಲವರ್ಧನೆ ತರಬೇತಿಯನ್ನು ಅಭ್ಯರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗುವಂತೆ ಆಯೋಜಿಸಲಾಗುತ್ತಿದೆ. ತರಬೇತಿಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಸೌಲಭ್ಯ ಒದಗಿಸಲು ಸಹಾಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಡುಂಬ ಶ್ರೀ ರಾಜ್ಯ ಸಂಪನ್ಮೂಲ ವ್ಯಕ್ತಿ ಶಿವು ಕುಮಾರ್, ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹೊನ್ನಪ್ಪ ಇತರರಿದ್ದರು.