ಉಚಿತ ಬ್ಯೂಟಿಷಿಯನ್ ಕೋರ್ಸ್ ತರಬೇತಿ

Published on

ಚಾಮರಾಜನಗರ: ಚಾಮರಾಜನಗರ ವಿಶ್ವ ವಿದ್ಯಾನಿಲಯವು ರೀಚ್ ಮಚ್ ಹೈಯರ್ ಸಂಸ್ಥೆಯ ಸಹಯೋಗದೊಂದಿಗೆ 3 ತಿಂಗಳ ಅವಧಿಯ ಉಚಿತ ಬ್ಯೂಟಿಷಿಯನ್ ಕೋರ್ಸ್ ತರಬೇತಿ ನೀಡಲಿದೆ.

ತರಬೇತಿಯಲ್ಲಿ ಬ್ಯೂಟಿಷಿಯನ್ ಕೌಶಲ್ಯಗಳಾದ ಮೇಕಪ್, ಚರ್ಮದ ಆರೈಕೆ, ಮ್ಯಾನಿಕ್ಯೂರ್, ಪಾದೋಪಚಾರ ಮತ್ತು ಇನ್ನಿತರ ತರಬೇತಿಯನ್ನು ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ನೀಡಲಾಗುತ್ತದೆ.

18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಶಾಲೆಯಿಂದ ಹೊರಗುಳಿದ ಯುವತಿಯರು, ಗೃಹಿಣಿಯರು ತರಬೇತಿ ಪಡೆಯಬಹುದು. ತಜ್ಞ ತರಬೇತುದಾರರಿಂದ ಪ್ರಾಯೋಗಿಕ ತರಬೇತಿ ಅಗತ್ಯವಿರುವ ಎಲ್ಲಾ ಉಪಕರಣಗಳು ಮತ್ತು ಉತ್ಪನ್ನಗಳೊಂದಿಗೆ ವೃತ್ತಿಪರ ಬ್ಯೂಟಿಷಿಯನ್ ಕಿಟ್ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪ್ರಮೋದ್ ಅವರನ್ನು ಸಂಪರ್ಕಿಸುವಂತೆ ಚಾಮರಾಜನಗರ ವಿಶ್ವ ವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net