ಕೊಕ್ಕರ್ಣೆ: ಬೈದೆಬೆಟ್ಟು ಶ್ರೀ ಪಂಚಾಕ್ಷರಿ ಗೇರುಬೀಜ ಕಾರ್ಖಾನೆ, ಬ್ರಹ್ಮಾವರ ಬೇರು ಕಲೆಕ್ಟಿವ್ ಪ್ರಾಯೋಜಕತ್ವದಲ್ಲಿ, ಆಶ್ರಯ ಹಸ್ತ ಟ್ರಸ್ಟ್, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ, ಜಿಲ್ಲಾ ರಕ್ತನಿಧಿ ಕೇಂದ್ರ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಕ್ಕರ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕರ್ಜೆ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಹಭಾಗಿತ್ವದಲ್ಲಿ ನೇತ್ರ ಚಿಕಿತ್ಸಾ ಉಚಿತ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಆಯುರ್ವೇದ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ ಜೂನ್ 1ರಂದು ಕೊಕ್ಕರ್ಣೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ 9.30ರಿಂದ ಜರುಗಲಿರುವುದು.
ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಉಡುಪಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಖಾಯಲ್ ರಕ್ತದಾನ ಶಿಬಿರ ಉದ್ಘಾಟಿಸುವರು. ಶ್ರೀ ಪಂಚಾಕ್ಷರಿ ಗೇರುಬೀಜ ಕಾರ್ಖಾನೆ ಮತ್ತು ಬೈದೆಬೆಟ್ಟು ಸಮೂಹ ಸಂಸ್ಥೆ ಮಾಲೀಕರಾದ ಶಾಲಿನಿ ರಘುರಾಮ, ಸಿಎ ರಘುರಾಮ ಎಂ.ಎಚ್., ಉಡುಪಿ ಜಿಪಂ ಮುಖ್ಯ ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.