

ಕಾರ್ಕಳ: ಶಾರದಾ ಮಹಿಳಾ ಮಂಡಲ ಅಧ್ಯಕ್ಷೆ ಸಾವಿತ್ರಿ ಮನೋಹರ ಹಾಗೂ ಅವರ ಪುತ್ರಿ ಸ್ವಾತಿ ಅಜಿತ್ ಶರ್ಮ ಅವರ ಕೃತಿ ಬಿಡುಗಡೆ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಟನೆ ಹಾಗೂ ಶಾರದಾ ಮಹಿಳಾ ಮಂಡಳಿ ಅನಂತಶಯನ ಇವುಗಳ ಸಹಭಾಗಿತ್ವದಲ್ಲಿ ಪೆರ್ವಾಜೆ ಶಾಲೆಯಲ್ಲಿ ನಡೆಯಿತು. ಸಾವಿತ್ರಿ ಮನೋಹರ್ ತಮ್ಮ ಕೃತಿಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.
ಸಾವಿತ್ರಿ ಅವರ ವಾನನಿಧಿ ಮೌನವಾದ ಎಂಬ ನಾಟಕ ಕೃತಿಯನ್ನು ಲೇಖಕಿ ಡಾ.ಜಾನಕಿ ಸುಂದರೇಶ್ ಬಿಡುಗಡೆ ವಾಡಿ ಕೃತಿಯ ಕುರಿತು ವಾತನಾಡಿದರು. ಸ್ವಾತಿ ಅಜಿತ್ ಶರ್ಮ ಅವರ ಪಂಜರದೊಳಗಿನ ಪಕ್ಷಿ ಚೊಚ್ಚಲ ಕವನ ಸಂಕಲನವನ್ನು ನಿವೃತ್ತ ಮುಖ್ಯಶಿಕ್ಷಕಿ ಮನೋಹರ ರಾವ್ ಹಾಗೂ ಸಾವಿತ್ರಿ ಮನೋಹರ್ ಲೋಕಾರ್ಪಣೆ ವಾಡಿದರು.
ನಿವೃತ್ತ ಶಿಕ್ಷಕಿ ಸುಲೋಚನ ತಿಲಕ್ ಪಂಜರದೊಳಗಿನ ಪಕ್ಷಿ ಕೃತಿಯ ಕುರಿತು ವಾತನಾಡಿದರು. ಜಾಗೃತಿಯ ಅಧ್ಯಕ್ಷೆ ಪ್ರೊ.ಮಿತ್ರಪ್ರಭಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೂರ್ಣಚಂದ್ರ ಹಂದಿಗೋಡು ಅವರ ತೆಂಗಿನ ಕರಟದಿಂದ ವಾಡಿದ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕನ್ನಡದಲ್ಲಿ ಪೂರ್ಣ ಅಂಕಗಳನ್ನು ಪಡೆದ ಕುವಾರಿ ಅಕ್ಷರ ಅವರನ್ನು ಸನ್ಮಾನಿಸಲಾಯಿತು. ಕುವಾರಿ ಆದ್ಯಾ ಶರ್ಮ, ವಿಶ್ರುತ್ ಶರ್ಮ, ನಿರ್ಜರ ರಾವ್, ಓಂಕಾರ್ ರಾವ್ ಪ್ರಾರ್ಥಿಸಿದರು. ಜಾಗೃತಿಯ ಕಾರ್ಯದರ್ಶಿ ವಾಲತಿ.ಜಿ.ಪೈ ಸ್ವಾಗತಿಸಿ, ಶಿಕ್ಷಕಿ ಲಕ್ಷ್ಮೀ ಹೆಗ್ಡೆ ವಂದಿಸಿದರು. ಶಿಕ್ಷಕಿ ಜ್ಯೋತಿ ಪಾಠಕ್ ನಿರೂಪಿಸಿದರು.