ಸಹಕಾರಿ ಬ್ಯಾಂಕ್ ಖಾತೆ ಮೇಲೂ ನಿಗಾ ಇಡಿ : ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್

DC photo
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯ ಸಹಕಾರಿ ಬ್ಯಾಂಕ್ ಮೂಲಕ ನಡೆಯುವ ಆರ್ಥಿಕ ವಹಿವಾಟುಗಳ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಕಲಬುರಗಿ ಡಿಸಿ ಕಚೇರಿಯಲ್ಲಿ ಸಹಕಾರ ಇಲಾಖೆ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಅವರು, ಸಂಶಯಾಸ್ಪದ ಯಾವುದೇ ವಹಿವಾಟು ಕಂಡುಬAದಲ್ಲಿ ತಕ್ಷಣ ಗಮನಕ್ಕೆ ತರಬೇಕು ಎಂದರು.
ಸAಶಾಯಾಸ್ಪದ ೫೦ ಸಾವಿರ ರೂ. ಮೇಲ್ಪಟ್ಟು, ಒಂದೇ ಖಾತೆಯಿಂದ ಹಲವರ ಖಾತೆಗೆಳಿಗೆ ಆರ್‌ಟಿಜಿಸ್ ಮೂಲಕ ಹಣ ವರ್ಗಾವಣೆ, ೧ ಲಕ್ಷ ರೂ. ಮೇಲ್ಪಟ್ಟ ಹಣ ಜಮೆ ಹಾಗೂ ರಾಜಕೀಯ ಪಕ್ಷಗಳ ಖಾತೆಯ ಪ್ರತಿ ವಿತ್ ಡ್ರಾವಲ್ ಮತ್ತು ಡಿಪಾಸಿಟ್ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ಭಂವರ್‌ಸಿAಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net