31ರಂದು ನೇತ್ರ ತಪಾಸಣೆ ಉಚಿತ ಶಿಬಿರ

Published on

ಮೂಲ್ಕಿ: ಶ್ರೀ ಸತ್ಯಸಾಯಿ ಬಾಬಾ ಅವರು ಜ.29, 1979ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಸ್ಮರಣಾರ್ಥ ಜ.31ರಂದು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ನೇತ್ರ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ.

ಬೆಳಗ್ಗೆ 9ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಬಳಿಕ ಬಪ್ಪನಾಡು ಅಮ್ಮನವರ ಮತ್ತು ಬಪ್ಪನಾಡು ದುರ್ಗಾ ಪಾರಾಯಣ ಗ್ರೂಪ್ ಬಗ್ಗೆ ವಿವರ ಇರುವ ಜಾಲತಾಣ ಲೋಕಾರ್ಪಣೆ, ನಳಿನಾಕ್ಷಿ ಉದಯರಾಜ್ ರಚಿತ ಶ್ರೀ ಬಪ್ಪನಾಡು ಕ್ಷೇತ್ರದ ಐತಿಹ್ಯದ ಕಥನಕಾವ್ಯ ಬಿಡುಗಡೆ, ಹಿರಿಯ ನಾಗರಿಕರಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10.45ರಿಂದ ಲೋಕ ಕಲ್ಯಾಣಾರ್ಥ ಅದಮಾರು ರಾಮಕೃಷ್ಣ ಭಟ್ ಬೆಂಗಳೂರು ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದೆ.

ಮೂಲ್ಕಿ ಬಪ್ಪನಾಡು ದುರ್ಗಾ ಪಾರಾಯಣ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ, ಮೂಲ್ಕಿ ವಿವೇಕ ಜಾಗೃತ ಬಳಗ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ, ಮೂಲ್ಕಿ ಬಂಟರ ಸಂಘ, ಮೂಲ್ಕಿ ದೇವಾಡಿಗ ಸಮಾಜ ಸೇವಾ ಸಂಘ, ಮೂಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾ, ಮೂಲ್ಕಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ, ಬಪ್ಪನಾಡು ದುರ್ಗಾಪರಮೇಶ್ವರಿ ಸೇವಾ ಯುವಕ ವೃಂದ, ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಲ್ಕಿ, ಪತಂಜಲಿ ಯೋಗ ಸೇವಾ ಸಮಿತಿ, ಬಪ್ಪನಾಡು ಹಾಗೂ ಬಪ್ಪನಾಡು ದುರ್ಗಾ ಪಾರಾಯಣ ಗ್ರೂಪ್ ಸಹಯೋಗದೊಂದಿಗೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net