

ಪುತ್ತೂರು ಗ್ರಾಮಾಂತರ : ಪ್ರತಿಯೊಬ್ಬರೂ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ನೇತ್ರ ತಜ್ಞ ಡಾ.ರಾಮಚಂದ್ರ ಹೇಳಿದರು.
ವೀರಮಂಗಲದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ್ಯೂ ವಿಷನ್ ಜನರೇಶನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ 2.5 ಎನ್‌ವಿಜಿ ಮಿತ್ರ ಸುರತ್ಕಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗದ ವತಿಯಿಂದ ನಡೆದ ನೇತ್ರ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಅಧ್ಯಕ್ಷತೆ ವಹಿಸಿದ್ದರು. ನೇತ್ರ ತಜ್ಞರಾದ ಡಾ.ಅಭಿರಾಮ್, ಡಾ.ಪ್ರಜ್ಞಾ, ಡಾ.ರಕ್ಷಿತಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ನವ್ಯಾ, ಸದಸ್ಯರಾದ ಹರೀಶ್, ಸುರೇಶ್ ಗಂಡಿ, ವಿನುತಾ, ಚಂದ್ರಾವತಿ, ಭವ್ಯಾ, ಸಂದೀಪ್ ಕಾಂತಿಲ, ರಮೇಶ್ ಗೌಡ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ತಾರಾನಾಥ ಸವಣೂರು ಸ್ವಾಗತಿಸಿ. ಶಿಕ್ಷಕಿ ಶಿಲ್ಪರಾಣಿ ವಂದಿಸಿದರು. ಶಿಕ್ಷಕಿ ಸೌಮ್ಯಾ ನಿರೂಪಿಸಿದರು. ಹೇಮಾವತಿ, ಮಧುಶ್ರೀ, ಸುಮಿತ್ರಾ, ಸವಿತಾ ಸಂಚನಾ ಸಹಕರಿಸಿದರು. ನೂರಾರು ಮಕ್ಕಳು ಹಾಗೂ ಊರಿನ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.