180ಕ್ಕೂ ಹೆಚ್ಚಿನ ಜನರಿಗೆ ಕಣ್ಣಿನ ತಪಾಸಣೆ

180ಕ್ಕೂ ಹೆಚ್ಚಿನ ಜನರಿಗೆ ಕಣ್ಣಿನ ತಪಾಸಣೆ
Published on

ರಾವಂದೂರು: ಆರ್.ವಿ.ಶಿವದೇವಪ್ಪ ಅವರ 50ನೇ ವರ್ಷದ ಸ್ಮರಣೋತ್ಸವ ಅಂಗವಾಗಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಮಾನಸ ಸೇವಾ ಸಾಂಸ್ಕೃತಿಕ ಸಂಸ್ಥೆಯ ಆವರಣದಲ್ಲಿ ಬುಧವಾರ ಕೊಯಮತ್ತೂರು ಅರವಿಂದ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ಉಚಿತ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ 180ಕ್ಕೂ ಹೆಚ್ಚಿನ ಜನರು ಕಣ್ಣಿನ ತಪಾಸಣೆಗೊಳಗಾದರು. ಜಿ.ಪಂ. ಮಾಜಿ ಸದಸ್ಯ ಆರ್.ಎಸ್. ಚಿಕ್ಕವೀರಪ್ಪ ಸೇವಾರ್ಥದಲ್ಲಿ 50 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. 60ಕ್ಕೂ ಹೆಚ್ಚಿನ ಜನರನ್ನು ಶಸ್ತ್ರಚಿಕಿತ್ಸೆಗೆ ಅರವಿಂದ್ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಡಾ. ಶ್ರೀಲೇಖಾ, ಡಾ. ಉಮಾ, ಕುಮಾರ್ ವಿಜಯ್, ನಾಗರತ್ನ, ಮಾಜಿ ಶಾಸಕ ಎಚ್.ಸಿ. ಬಸವರಾಜ್, ಶಿವದೇವಪ್ಪ ಅವರ ಕುಟುಂಬಸ್ಥರು ಇತರರು ಇದ್ದರು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net