

ಹಲಗೂರು: ಲಯನ್ಸ್ ಕ್ಲಬ್ ವತಿಯಿಂದ ಶುಕ್ರವಾರ ಹಲಗೂರಿನ ಮದ್ದೂರು ರಸ್ತೆಯಲ್ಲಿರುವ ಹಲಗೂರು ಪ್ರೌಢಶಾಲೆಯ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ನೇತ್ರಾಧಿಕಾರಿ ಉಮೇಶ್ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ನಡೆಸಿ ಮಾತನಾಡಿ, ತರಕಾರಿ-ಸೊಪ್ಪುಗಳ ಸೇವನೆಯಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಮ್ಮ ಆರೋಗ್ಯದ ಜತೆಗೆ ಕಣ್ಣಿನ ದೃಷ್ಟಿಯೂ ಚೆನ್ನಾಗಿರುತ್ತದೆ ಎಂದರು.
ಶಿಬಿರದಲ್ಲಿ ನೇತ್ರ ಆರೋಗ್ಯ ಸುರಕ್ಷತೆ, ದೃಷ್ಟಿ ದೋಷ, ಕಣ್ಣಿನ ಇತರ ಸಮಸ್ಯೆಗಳ ಪರೀಕ್ಷೆ ನಡೆಸಿ ಸಲಹೆ ನೀಡಲಾಯಿತು. 108 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಹಲಗೂರು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎನ್. ಕೆ.ಕುಮಾರ್, ಕಾರ್ಯದರ್ಶಿ ಡಿ.ಎಲ್.ಮಾದೇಗೌಡ, ಖಜಾಂಚಿ ಕೆ.ಶಿವರಾಜು, ಸದಸ್ಯರಾದ ಡಾ.ಸಂಶುದ್ದೀನ್, ಎ.ಟಿ.ಶ್ರೀನಿವಾಸ, ಮನೋಹರ, ಸಿ.ಪ್ರವೀಣ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್. ಶಿವರಾಮ್, ಶಿಕ್ಷಕ ಕೃಷ್ಣ ಸೇರಿದಂತೆ ಇತರರು ಇದ್ದರು.