ವಿಜೃಂಭಣೆಯ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ

4- Birlingeshwar
Published on

ಹುರಳಿಕುಪ್ಪಿ: ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.

ಗುರುವಾರ ಬೆಳಗ್ಗೆ ಬೀರಲಿಂಗೇಶ್ವರಗೆ ವಿಶೇಷ ಪೂಜೆ ಹಾಗೂ ಕರೆಕಟ್ಟುವ ಕಾರ್ಯಕ್ರಮ ನಡೆಯಿತು. ಶುಕ್ರವಾರ ಸಂಜೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ಹಾಗೂ ಬೆಲ್ಲದ ಬಂಡಿಯನ್ನು ಡೊಳ್ಳು, ಭಜನೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಹೊರ ಬೀರಲಿಂಗೇಶ್ವರ ಗುಡಿಗೆ ತಲುಪಿತು.

ಭಕ್ತರು ದೀಡ್ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರು. ನಂತರ ರಾತ್ರಿ 10 ಗಂಟೆಗೆ ವಿವಿಧ ಕಾರ್ಯಕ್ರಮ ಜರುಗಿದವು. ಭೀರಪ್ಪ ಕೊಳ್ಳವರ, ರುದ್ರಪ್ಪ ಕಳ್ಳಿಮನಿ, ಹೊನ್ನಪ್ಪ ಕೊಳ್ಳವರ, ಏಕಪ್ಪ ಬಿಜ್ಜೂರ, ನಿಂಗಪ್ಪ ಎರೆಸಿಮಿ, ಯಲ್ಲಪ್ಪ ಬಡಕಣ್ಣನವರ, ಹನಮಂತಪ್ಪ ವೈಯಾಳಿ, ಹನಮಂತಪ್ಪ ಮುಸರಿ, ಅಶೋಕ ಬಿಜ್ಜೂರು, ಗಣೇಶ ಕುಲಕರ್ಣಿ, ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net