

ಹಟ್ಟಿಚಿನ್ನದಗಣಿ: ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ 4 ಕೆಜಿ ಹೆಚ್ಚುವರಿಯಾಗಿ ತೊಗರಿ ಪಡೆಯುತ್ತಿರುವುದನ್ನು ಖಂಡಿಸಿ, ರೈತರು ಶುಕ್ರವಾರ ಗೆಜ್ಜಲಗಟ್ಟಾ ಖರೀದಿ ಕೇಂದ್ರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ತೊಗರಿ ಖರೀದಿಯಲ್ಲಿ ಹಗಲು ದರೋಡೆ!
ರೈತರು ಬೆಳೆದ ತೊಗರಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಖರೀದಿ ಕೇಂದ್ರಕ್ಕೆ ರೈತರು ಬರುತ್ತಾರೆ. ಆದರೆ, ಇಲ್ಲಿಯೂ ಅಕ್ರಮ ನಡೆದರೆ ಹೇಗೆ?. ಖರೀದಿ ಕೇಂದ್ರದವರು ಹಾಡಹಗಲೆ ರೈತರ ಶೋಷಣೆ ನಡೆಸಿದ್ದಾರೆ. ಈ ಬಗ್ಗೆ ಯಾರೊಬ್ಬ ಅಧಿಕಾರಿಯೂ ಕೇಳುತ್ತಿಲ್ಲ.
ಒಂದೆಡೆ ಹಮಾಲಿ ಖರ್ಚು ಮತ್ತೊಂದೆಡೆ ಹೆಚ್ಚುವರಿ ಹಣವಸೂಲಿ ಮಾಡುತ್ತಿದ್ದಾರೆ. ಕ್ವಿಂಟಾಲ್ ತೊಗರಿಗೆ 4ಕೆಜಿ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದು, ಕ್ರಮ ಕೈಗೊಳ್ಳಬೇಕು. ರೈತರಿಗೆ ಹೆಚ್ಚುವರಿ ಹಣ ನೀಡಬೇಕೆಂದು ಆಗ್ರಹಿಸಿದರು.
ಕೇಂದ್ರದ ಅಧಿಕಾರಿ, ಪ್ರಾಕೃಪಸ ಸಂಘದ ಕಾರ್ಯದರ್ಶಿ ರಾಘವೇಂದ್ರ ಪ್ರತಿಕ್ರಿಯಿಸಿ, ವೇಬ್ರಿಡ್ಜ್‌ನಲ್ಲಿ ಸರಿಯಾದ ತೂಕ ಸಿಗದ ಕಾರಣ ರೈತರಿಂದ ತೂಕದಲ್ಲಿ ಹೆಚ್ಚುವರಿಯಾಗಿ ತೊಗರಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ತಹಸೀಲ್ದಾರ್, ಲಿಂಗಸುಗೂರುಶಂಶಾಲಂರೈತರಿಂದ ಹೆಚ್ಚುವರಿ ತೊಗರಿ ಪಡೆಯುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ತಕ್ಷಣವೇ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ, ತಪಿತಸ್ಥರ ವಿರುದ್ಧ ಕ್ರಮಕೈಗೊಂಡು ಸಮಸ್ಯೆ ಪರಿಹರಿಸಲಾಗುವುದು.