ಲಸಿಕೆ ನೀಡುವ ವ್ಯವಸ್ಥೆ ಪ್ರವಾಸಿಗರಿಗೂ ವಿಸ್ತರಣೆ

03Kush02
Published on

ಕುಶಾಲನಗರ: ಕುಶಾಲನಗರದ ಮಹಿಳಾ ಸಮಾಜದ ಆವರಣದಲ್ಲಿ ಭಾನುವಾರ ಆಶಾ ಕಾರ್ಯಕರ್ತರು 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿದರು.


ಲಸಿಕೆ ನೀಡುವ ವ್ಯವಸ್ಥೆಯನ್ನು ಪ್ರವಾಸಿಗರಿಗೂ ವಿಸ್ತರಿಸಿದ್ದು ಜಿಲ್ಲೆಗೆ ಬಂದಿರುವ ಹಲವು ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಂಡರು.


ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಕಳೆದ ಹತ್ತು ವರ್ಷಗಳಿಂದ ವಿವಿಧಡೆಗಳಲ್ಲಿ ಪೋಲಿಯೋ ಲಸಿಕೆ ನೀಡುವ ಮುಖಾಂತರ ಪೋಲಿಯೋ ಮುಕ್ತ ಭಾರತ ನಿರ್ಮಾಣ ಮಾಡುತ್ತಿದ್ದೇವೆ. ಈ ವರ್ಷವೂ 5 ವರ್ಷದ ಒಳಗಿನ ಪ್ರತಿ ಮಕ್ಕಳಿಗೂ 2 ಹನಿ ಪೋಲಿಯೋ ಲಸಿಕೆ ಹಾಕಿಸುವ ಮುಖಾಂತರ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಪಣತೊಡೋಣ ಎಂದು ಆಶಾ ಕಾರ್ಯಕರ್ತೆ ಪವಿತ್ರಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net