ಸರ್ಕಾರಿ ಬಸ್ ಸೇವೆ ವಿಸ್ತರಣೆ

Sul_Govt Bus
ಪಂಜಿಗುಂಡಿಗೆ ಬಂದ ಬಸ್‌ಅನ್ನು ಸಾರ್ವಜನಿಕರು ಬರಮಾಡಿಕೊಂಡರು. ಗ್ರಾಮ ಪಂಚಾಯಿತಿ ಸದಸ್ಯ ಇಬ್ರಾಹಿಂ ಕಾಸಿಂ ಕನಕಮಜಲು, ಮಾಜಿ ಅಧ್ಯಕ್ಷೆ ವಸಂತಿ, ವಿಜಯಕುಮಾರ್ ನರಿಯೂರು ಮೊದಲಾದವರಿದ್ದರು.
Published on

ಸುಳ್ಯ: ನಗರದಿಂದ ಕನಕಮಜಲು ತನಕ ಸಾಗುತ್ತಿದ್ದ ಸರ್ಕಾರಿ ಬಸ್ ಸಂಚಾರವನ್ನು ಶಾಲಾ ವಿದ್ಯಾರ್ಥಿಗಳು ಮತ್ತು ಜನರ ಬೇಡಿಕೆಯಂತೆ ಕನಕಮಜಲು ಗ್ರಾಮದ ಪಂಜಿಗುಂಡಿ ಕಾಲನಿ ತನಕ ವಿಸ್ತರಣೆ ಮಾಡಲಾಗಿದ್ದು, ಗುರುವಾರ ಬೆಳಗ್ಗಿನಿಂದ ಬಸ್ ಪಂಜಿಗುಂಡಿಯಿಂದ ಸಂಚಾರ ಆರಂಭಿಸಿದೆ.

ಈ ಮೊದಲು ಕೆಎಸ್‌ಆರ್‌ಟಿಸಿ ಬಸ್ ಸುಳ್ಯ ಘಟಕದಿಂದ ಕನಕಮಜಲು ತನಕ ಮಾತ್ರ ಹೋಗುತ್ತಿತ್ತು. ಇದರಿಂದ ಪಂಜಿಗುಂಡಿ ಪರಿಸರದ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ಸ್ಥಳೀಯರಾದ ಕೆ.ಮಹಮ್ಮದ್ ಫವಾಜ್, ವಿಜಯಕುಮಾರ್ ನರಿಯೂರು, ನಾರಾಯಣ ಪಂಜಿಗುಂಡಿ ಮತ್ತಿತರರು ಸೇರಿ ಕನಕಮಜಲು ಗ್ರಾಮದ ಪಂಜಿಗುಂಡಿ ಕಾಲನಿ ತನಕ ಬಸ್ ಸಂಚಾರ ವಿಸ್ತರಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂದಿಸಿದ ಸಚಿವರು ಸಂಬಂಧಿಸಿದ ವಿಭಾಗಾಧಿಕಾರಿಗಳಿಗೆ ತಿಳಿಸಿದ್ದು, ಗುರುವಾರದಿಂದ ಬಸ್ ಪಂಜಿಗುಂಡಿ ತನಕ ಹೋಗುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯ ಇಬ್ರಾಹಿಂ ಕಾಸಿಂ ಕನಕಮಜಲು, ಮಾಜಿ ಅಧ್ಯಕ್ಷೆ ವಸಂತಿ, ವಿಜಯಕುಮಾರ್ ನರಿಯೂರು, ಬಾಬು, ಸುಮಂತ, ರಾಘವ, ರವಿ, ಗಣೇಶ್, ಸ್ಥಳೀಯರು ಬಸ್ಸನ್ನು ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net