ಕುಖ್ಯಾತ ಕಳವು ಆರೋಪಿ ಬಂಧನ

Arrest Kaidhi
Published on

ಕಾಸರಗೋಡು: ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಕೃತ್ಯಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ಕಳ್ಳ ಪನತ್ತಡಿ ಪಾನತ್ತೂರು ನಿವಾಸಿ ರತೀಶ್ ಅಲಿಯಾಸ್ ಬಂಡಿಚೋರ್ ರತೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪರಪ್ಪ ತಾಲೂಕು ಕಚೇರಿ ಗ್ರಂಥಾಲಯ ಕೌನ್ಸಿಲ್ ಕಚೇರಿ ಹಾಗೂ ಹೋಟೆಲ್‌ಗಳಿಂದ ಇತ್ತೀಚೆಗೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ. ವೆಳ್ಳರಿಕುಂಡು ಠಾಣೆ ಎಸ್.ಐ ಶ್ರೀದಾಸ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಆರೋಪಿಯನ್ನು ಕಳವು ನಡೆದ ಪ್ರದೇಶಕ್ಕೆ ಕರೆದೊಯ್ದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net