

ದಾವಣಗೆರೆ: ಕೆರೆ ಪಕ್ಕದ ರಸ್ತೆ ವಿಸ್ತರಣೆಗೆ ಸ್ಫೋಟಕ ಬಳಕೆ ಮಾಡಿದ್ದು, ಸ್ಫೋಟದ ತೀವ್ರತೆಗೆ ಕಲ್ಲು-ಮಣ್ಣು ಕೆರೆಗೆ ಚಿಮ್ಮಿದ ಘಟನೆ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ನಡೆದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆರೆಗೆ ಹಾನಿ ಮಾಡುತ್ತಿರುವ ಬಗ್ಗೆ ನೆಟ್ಟಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಳೆಕೆರೆಯ ಪಕ್ಕದ ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭ ಈ ಘಟನೆ ನಡೆದಿದೆ.
ಸೂಳೆಕೆರೆ ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎಂಬ ಖ್ಯಾತಿ ಪಡೆದಿದೆ. ಕೆರೆ ಪಕ್ಕದ ರಸ್ತೆ ವಿಸ್ತರಣೆಗೆ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಒತ್ತುವರಿಯಿಂದ ಕೆರೆ ನಲುಗಿದೆ. ಇದೀಗ ಸ್ಪೋಟಕ ಬಳಕೆಯಿಂದ ಕೆರೆ ಹಾಗೂ ಕೆರೆ ಚಾನಲ್‌ಗೆ ಹಾನಿಯಾಗುವ ಭೀತಿ ಎದುರಾಗಿದೆ. ಸ್ಪೋಟಕಗಳ ಬದಲು ಜೆಸಿಬಿ ಯಂತ್ರ ಬಳಸಲು ಸ್ಥಳೀಯರ ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)