

ಗಜೇಂದ್ರಗಡ: ಶಿಕ್ಷಕರನ್ನು ಬಿಎಲ್ಒ ಕಾರ್ಯದಿಂದ ಕೈ ಬಿಡುವಂತೆ ಒತ್ತಾಯಿಸಿ ಶುಕ್ರವಾರ ಗಜೇಂದ್ರಗಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿಎಲ್ಒ ಕಾರ್ಯಕ್ಕೆ ನಿಯೋಜಿಸಿದ್ದೀರಿ ಇದನ್ನು ಗಜೇಂದ್ರಗಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಖಂಡಿಸುತ್ತದೆ. ಈಗಾಗಲೇ ಶಾಲೆಗಳಲ್ಲಿ ಶಿಕ್ಷಕರಿಗೆ ಸಾಕಷ್ಟು ಒತ್ತಡಗಳಿವೆ.
ಬಿಸಿಯೂಟ , ಮೊಟ್ಟೆ, ಬಾಳೆಹಣ್ಣು, ಎಸ್ಟಿಎಸ್ ಮಾಹಿತಿ ಹೀಗೆ ಹಲವಾರು ಕೆಲಸಗಳಿದ್ದು, ಶೈಕ್ಷಣಿಕವಾಗಿ ಮಕ್ಕಳ ಬೋಧನೆಗೆ ತೊಂದರೆ ಆಗುತ್ತಿದೆ. ಹೀಗಾಗಿ ನಮ್ಮನ್ನು ಬಿಎಲ್ಒ ಕಾರ್ಯದಿಂದ ಮುಕ್ತಗೊಳಿಸಿ ಎಂದು ಮನವಿ ಸಲ್ಲಿಸಿದರು
.
ಗಜೇಂದ್ರಗಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ವಿ.ಎ. ಹಾದಿಮನಿ, ಸಂಘದ ಪ್ರ. ಕಾರ್ಯದರ್ಶಿ ಎಸ್. ಕೆ. ಸರಗಣಾಚಾರಿಮಠ, ಡಾ. ಎಂ.ಎ. ಹಾದಿಮನಿ, ಎಸ್.ವಿ. ವಡ್ಡರ, ಎಸ್.ಎಸ್. ಡೊಳ್ಳಿನ, ಬಿ.ಎಂ. ಹಿರೇಮಠ, ಎಸ್.ಆರ್. ಅಂಗಡಿ, ಸುಧಾ ಜಾಡರ, ಬಿ.ಎಸ್. ಅಣ್ಣಿಗೇರಿ, ಎಸ್.ಆರ್. ನಿಲೂರ, ಎಂ.ವಿ. ಚಿನ್ನೂರ, ಎ.ಎಸ್. ಗೆದಿಗೇರಿ, ಗಿರೀಶ ನಾಯಕ, ಎಸ್.ಎಸ್. .ಪಸಾರದ, ಕೆ.ಬಿ. ಯರಗೇರಿ, ಬಸವರಾಜ ದೊಡ್ಡಗೌಡ್ರ ಇದ್ದರು.