ಮಾಜಿ ಉಪಸಭಾಪತಿ ಡೇವಿಡ್ ಸಿಮೆಯೋನ್ ಇನ್ನಿಲ್ಲ

devid simiyon
Published on

ಬೆಂಗಳೂರಿನ ಮಣಿಪಾಲ್ ಅಸ್ಪತ್ರೆಯಲ್ಲಿ ನಿಧನ | ೧೨ರಂದು ಕಲಬುರಗಿಯಲ್ಲಿ ಅಂತ್ಯಕ್ರಿಯೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ವಿಧಾನ ಪರಿಷತ್ ಮಾಜಿ ಉಪಸಭಾಪತಿ ಹಾಗೂ ಕಾಂಗ್ರೆಸ್ ಮುಖಂಡರಾಗಿದ್ದ ಡೇವಿಡ್ ಸಿಮೆಯೋನ್ (೭೫) ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜಾತ್ಯತೀತ, ಸಮಾಜವಾದಿಯಾಗಿದ್ದ ಅವರ ಅಗಲಿಕೆಯಿಂದ ಕ್ರೆÊಸ್ತ್ ಸಮುದಾಯ ಹಿರಿಯ ನಾಯಕನ ಕಳೆದುಕೊಂಡAತಾಗಿದೆ.

ಪತ್ನಿ,ಇಬ್ಬರು ಪುತ್ರಿಯರು,ಪುತ್ರ ಸೇರಿದಂತೆ ಅಪಾರ ಬಂಧುಗಳನ್ನು, ಬೆಂಬಲಿಗರನ್ನು ಅಗಲಿದ್ದಾರೆ. ಜನ್ಮ ದಿನದ ಮುನ್ನಾ ದಿನವೇ ಕೊನೆಯುಸಿರೆಳೆದಿದ್ದಾರೆ. ಜೂನ್೧೧,೧೯೫೦ ರಂದು ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದಲ್ಲಿ ಜನಿಸಿದ್ದರು. ಜೂನ್ ೧೦ ರಂದು ಕೊನೆಯುಸಿರೆಳೆದಿದ್ದಾರೆ. ಅವರ ಬದುಕ್ಕಿದ್ದರೆ ಇಂದು ಜನ್ಮ ದಿನಾಚರಣೆ ಮಾಡಿಕೊಳ್ಳುತ್ತಿದ್ದರು. ಈ ಸಲ ವಿಧಾನ ಪರಿಷತ್‌ಗೆ ಪ್ರವೇಶಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಜೂನ್ ೧೧ ರಂದು ಬೆಳಗ್ಗೆ ೯ ಗಂಟೆಗೆ ಮಣಿಪಾಲ್ ಅಸ್ಪತ್ರೆಯಿಂದ ರಿಚ್‌ಮಂಡ್ ಟೌನ್ ಮೆಥೋಡಿಸ್ಟ್ ಚರ್ಚ್ (ಆರ್‌ಟಿಎಂಸಿ)ಯವರೆಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತರಲಾಗುವುದು. ೧೧ ಗಂಟೆಯಿAದ ಕ್ರೆÊಸ್ತ್ ಧರ್ಮದಂತೆ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ, ಸಂಜೆ ೫ ಗಂಟೆಯವರೆಗೂ ಚರ್ಚ್ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಬಳಿಕ ಪಾರ್ಥಿವ ಶರೀರವನ್ನು ಕಲಬುರಗಿಗೆ ರವಾನಿಸಲಾಗುತ್ತದೆ.

ಜೂನ್ ೧೨ ರಂದು ೧೦ ಗಂಟೆಗೆ ಕಲಬುರಗಿ ನಗರದ ಐವಾನ್-ಇ-ಶಾಹಿ ರಸ್ತೆಯಲ್ಲಿರುವ ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್ಗೆ ತರಲಾಗುವುದು. ಧಾರ್ಮಿಕ ಕಾರ್ಯಗಳ ಬಳಿಕ ೩ ಗಂಟೆಯವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಂತಿಮ ಯಾತ್ರೆ ಶುರುವಾಗಲಿದ್ದು, ಸಂಜೆ ೫ ಗಂಟೆ ಸುಮಾರಿಗೆ ವೆಂಕಟೇಶ ನಗರದಲ್ಲಿರುವ ಕ್ರಿಶ್ಚಿಯನ್ ಗ್ರೇ ಯಾರ್ಡ್ನಲ್ಲಿ ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಡೇವಿಡ್ ನಿಧನಕ್ಕೆ ಜೆಡಿಎಸ್,ಕಾಂಗ್ರೆಸ್ ಪಕ್ಷದ ಮುಖಂಡರು, ಶಾಸಕರು, ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

=====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net