ದ್ವಿಚಕ್ರ ವಾಹನಕ್ಕೆ ಮಾಜಿ ಶಾಸಕರ ಕಾರು ಡಿಕ್ಕಿ, ರೈತರೊಬ್ಬರ ಕಾಲು ಮುರಿತ..

MLA car
Published on

ತುಮಕೂರು: ಮಾಜಿ ಶಾಸಕರ ಕಾರು ಡಿಕ್ಕಿ ಹೊಡೆದು ರೈತರೊಬ್ಬರ ಕಾಲು ಮುರಿತಕ್ಕೊಳಗಾದ ಘಟನೆ ಸಂಭವಿಸಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ತೊಳಲಿ ಗ್ರಾಮದಲ್ಲಿ ಈ ಅವಘಡ ಉಂಟಾಗಿದೆ. ಗಾಯಾಳುವನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿಯ ಸುರೇಶ್​ ಗೌಡ ಅವರ ಫಾರ್ಚೂನರ್ ಕಾರು, ಟಿವಿಎಸ್ ಎಕ್ಸ್​ಎಲ್​ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ತೊಳಲಿ ಗ್ರಾಮದ ರೈತ ಸುರೇಶ್ ಎಂಬವರ ಕಾಲು ಮುರಿತಕ್ಕೊಳಗಾಗಿದೆ.

ಮಾಜಿ ಶಾಸಕರು ಮೈಸೂರಿನಿಂದ ತುಮಕೂರು ಕಡೆಗೆ ಸಾಗುತ್ತಿದ್ದು, ರೈತ ಸುರೇಶ್ ತಮ್ಮ ದ್ವಿಚಕ್ರ ವಾಹನದಲ್ಲಿ ಜಮೀನಿನಿಂದ ಜಾನುವಾರುಗಳಿಗೆ ಮೇವು ತೆಗೆದುಕೊಂಡು ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ.

ಅಪಘಾತ ಮಾಡಿ ಗಾಯಾಳು ರೈತನ ಮೇಲೆ ಮಾಜಿ ಶಾಸಕರು ಎಗರಾಡಿದ್ದು, ಜನರು ಜಮಾಯಿಸುತ್ತಿದ್ದಂತೆ ಸುಮ್ಮನಾಗಿದ್ದಾರೆ. ಬಳಿಕ ತನ್ನ ಕಾರು ಬಿಟ್ಟು, ಬೇರೊಂದು ಕಾರಿನಲ್ಲಿ ಗಾಯಳುವನ್ನು ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ನಾಗಮಂಗಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net